ಗುರುವಾರ , ಫೆಬ್ರವರಿ 27, 2020
19 °C

'ಜಂಟಲ್‌ಮನ್‌' ಹಾಡು ಕೇಳಿ: ಅರೆರೆ ಶುರುವಾಯಿತು ಹೇಗೆ, ಪದವೇ ಸಿಗದಾಯಿತು ಹೇಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಗಾಯಕ ವಿಜಯ್ ಪ್ರಕಾಶ್ ಜೋಡಿ  ಜಂಟಲ್‌ಮನ್‌ ಚಿತ್ರದ ‘ಅರೆರೇ... ಶುರುವಾಯಿತು‘ ಹಾಡಿನ ಮೂಲಕ ಮತ್ತೆ ಮೋಡಿ ಮಾಡಿದೆ.

ಗುರುವಾರ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ಈ ರೋಮ್ಯಾಂಟಿಕ್‌ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಇದೇ ಜೋಡಿಯಾ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಹ್ಯಾಂಡ್ಸಪ್ ಹಾಡು ಸಖತ್ ಸೌಂಡ್‌ ಮಾಡಿತ್ತು. 

ನಟ ಪ್ರಜ್ವಲ್ ದೇವರಾಜ್‌ ಅಭಿನಯದ ಜಂಟಲ್‌ಮನ್‌ ಚಿತ್ರಕ್ಕೆ ಗುರು ದೇಶಪಾಂಡೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಅರೆರೆ ಶುರುವಾಯಿತು ಹೇಗೆ, ಪದವೇ ಸಿಗದಾಯಿತು ಹೇಗೆ, ಹೃದಯ ಕಳುವಾಯಿತು ಹೇಗೆ‘... ಎನ್ನುವ ಪದಗಳಿಂದ ಆರಂಭವಾಗುವ ಈ ಹಾಡು ಕೇಳುವುದಕ್ಕೆ ಇಂಪಾಗಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರು ಈ ಹಾಡು ಬರೆದಿದ್ದಾರೆ. 

ಈಗಾಗಲೇ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು