ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Godfather: ತೆಲುಗು ಚಿತ್ರರಂಗಕ್ಕೆ ಸಲ್ಮಾನ್ ಖಾನ್ ಎಂಟ್ರಿ

Last Updated 16 ಮಾರ್ಚ್ 2022, 9:46 IST
ಅಕ್ಷರ ಗಾತ್ರ

ಬಾಲಿವುಡ್ ನಟ ಸಲ್ಮಾನ್ ಖಾನ್ ತೆಲುಗು ಚಿತ್ರರಂಗಕ್ಕೂ ಕಾಲಿಡುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಗಾಡ್‌ಫಾದರ್' ಚಿತ್ರದಲ್ಲಿ ಸಲ್ಮಾನ್ ನಟಿಸುತ್ತಿದ್ದಾರೆ.

ಈ ವಿಷಯವನ್ನು ಖುದ್ದಾಗಿ ಚಿರಂಜೀವಿ ಘೋಷಣೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಅವರನ್ನು ಸ್ವಾಗತಿಸಿರುವ ಚಿರಂಜೀವಿ, 'ನಿಮ್ಮ ಆಗಮನವು ಎಲ್ಲರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ನಿಮ್ಮ ಜೊತೆಗೆ ಪರದೆ ಹಂಚಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ನಿಮ್ಮ ಸಾನಿಧ್ಯವು ಪ್ರೇಕ್ಷಕರಿಗೆ ಕಿಕ್ ನೀಡುವುದರಲ್ಲಿ ಸಂಶಯವೇ ಇಲ್ಲ' ಎಂದು ಹೇಳಿದ್ದಾರೆ.

ಗಾಡ್‌ಫಾದರ್ ಚಿತ್ರದಲ್ಲಿ ನಟಿ ನಯನತಾರಾ ಕೂಡ ನಟಿಸುತ್ತಿದ್ದಾರೆ.

ಮಲಯಾಳಂನ ಸೂಪರ್ ಹಿಟ್ ಲೂಸಿಫರ್‌ನ ತೆಲುಗು ರಿಮೇಕ್ ಗಾಡ್‌ಫಾದರ್ ಚಿತ್ರವನ್ನು ಮೋಹನ್ ರಾಜ ನಿರ್ದೇಶಿಸುತ್ತಿದ್ದಾರೆ. ಮಲಯಾಳಂನಲ್ಲಿ ಪೃಥ್ವಿರಾಜ್ ನಟಿಸಿರುವ ಪಾತ್ರದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT