ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಲ್ಲೂ ‘ಕಬ್ಜ’ ಹವಾ: ಟ್ರೈಲರ್ 12 ಮಿಲಿಯನ್ ವೀಕ್ಷಣೆ

Last Updated 6 ಮಾರ್ಚ್ 2023, 10:54 IST
ಅಕ್ಷರ ಗಾತ್ರ

ಸದ್ಯ ಭಾರತೀಯ ಚಿತ್ರರಂಗದಲ್ಲೆಲ್ಲ ‘ಕಬ್ಜ’ ಸಿನಿಮಾದ ಮಾತು. ಶನಿವಾರ ಐದು ಭಾಷೆಗಳಲ್ಲಿ ತೆರೆಕಂಡ ಚಿತ್ರದ ಟ್ರೈಲರ್‌ ಸಖತ್‌ ಸದ್ದು ಮಾಡುತ್ತಿದ್ದು, ಕನ್ನಡ ದಲ್ಲಿ ಟ್ರೈಲರ್‌ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಚಿತ್ರದ ಹಿಂದಿ ಟ್ರೈಲರ್‌ ಅನ್ನು ಖ್ಯಾತ ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ರಿಲೀಸ್‌ ಮಾಡಿದರು.

ಚಿತ್ರದ ಮೊದಲ ಭಾಗ ‘ಕಬ್ಜ– ದಿ ರೈಸ್‌ ಆಫ್‌ ಗ್ಯಾಂಗ್‌ಸ್ಟರ್ಸ್‌ ಇನ್‌ ಇಂಡಿಯಾ’ ‘ಕೆ.ಜಿ.ಎಫ್‌’ ಕಲರ್‌ನಲ್ಲೇ ಮೂಡಿಬಂದಿದ್ದು, ಸಾಲು ಸಾಲು ಪಾತ್ರಗಳನ್ನು ಟ್ರೈಲರ್‌ ಮೂಲಕ ನಿರ್ದೇಶಕ ಆರ್.ಚಂದ್ರು ತೆರೆಗೆ ಪರಿಚಯಿಸಿದ್ದಾರೆ. ಇದರಲ್ಲಿ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರ ಪಾತ್ರದ ಬಗ್ಗೆ ಕುತೂಹಲ ಹೆಚ್ಚಿದೆ. ಇತ್ತೀಚೆಗಷ್ಟೇ ಶಿವರಾಜ್‌ಕುಮಾರ್‌ ಅವರೂ ‘ಕಬ್ಜ’ದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ ಎಂದು ಚಿತ್ರತಂಡ ಘೋಷಿಸಿತ್ತು. ಇದರ ಬೆನ್ನಲ್ಲೇ ಟ್ರೈಲರ್‌ನಲ್ಲಿ ಅವರ ಪಾತ್ರದ ಸಣ್ಣ ತುಣುಕೊಂದನ್ನು ತೋರಿಸಲಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ, 1960-1984ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ‘ಕಬ್ಜ’ದಲ್ಲಿದೆ ಎಂದು ಚಿತ್ರತಂಡ ಈ ಹಿಂದೆ ತಿಳಿಸಿತ್ತು. ಟ್ರೈಲರ್‌ ನೋಡಿದ ಬಳಿಕ, ಉಪೇಂದ್ರ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ ಎನ್ನುವ ಪ್ರಶ್ನೆಯೊಂದು ಹುಟ್ಟಿದೆ. ‘ಕಬ್ಜ’ದ ಟೀಸರ್‌, ಪೋಸ್ಟರ್‌ಗಳಲ್ಲಿ ಗ್ಯಾಂಗ್‌ಸ್ಟರ್‌ ಆಗಿ ಕಾಣಿಸಿಕೊಂಡಿದ್ದ ಉಪೇಂದ್ರ ಅವರ ಪಾತ್ರ, ಟ್ರೈಲರ್‌ನಲ್ಲಿ ಹೊಸ ರೂಪ ಪಡೆದಿದೆ. ಭಾರತೀಯ ವಾಯುಸೇನೆ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುತ್ತಿರುವ ‘ಅರ್ಕೇಶ್ವರ’ ಎಂಬ ಪಾತ್ರದಲ್ಲಿ ಉಪೇಂದ್ರ ಇಲ್ಲಿ ಕಾಣಿಸಿಕೊಂಡಿದ್ದಾರೆ. ನಟ ಸುದೀಪ್‌ ಐಪಿಎಸ್‌ ಅಧಿಕಾರಿ ‘ಭಾರ್ಗವ್‌ ಭಕ್ಷಿ’ ಪಾತ್ರದಲ್ಲಿ ಇಲ್ಲಿ ನಟಿಸಿದ್ದಾರೆ. ನಟ ಅಚ್ಯುತ್‌ ಕುಮಾರ್‌ ಅವರೂ ವಿಭಿನ್ನ ಗೆಟಪ್‌ನಲ್ಲಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಟ್ರೈಲರ್‌ ಟ್ವಿಟರ್‌ನಲ್ಲೂ ಟ್ರೆಂಡಿಂಗ್‌ನಲ್ಲಿದೆ. ಚಿತ್ರ ಮಾರ್ಚ್ 17ರಂದು ವಿಶ್ವದಾದ್ಯಂತ ತೆರೆ‌ ಕಾಣಲಿದೆ.

ಈ ಚಿತ್ರದ ಐದೂ ಭಾಷೆಯ ಟ್ರೈಲರ್ ವೀಕ್ಷಣೆ ಇದುವರೆಗೆ 12 ಮಿಲಿಯನ್ (1.20 ಕೋಟಿ) ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT