‘ರತ್ನನ್ಪ್ರಪಂಚ’ ಖ್ಯಾತಿಯ ನಟ ಪ್ರಮೋದ್ ನಟನೆಯ ‘ಹಲ್ಕಾ ಡಾನ್’ ಚಿತ್ರ ಎರಡು ಹಂತಗಳ ಚಿತ್ರೀಕರಣ ಪೂರ್ಣಗೊಳಿಸಿದೆ. ಛಲಾ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಮೋದ್ಗೆ ಅಮೃತಾ ಅಯ್ಯಂಗಾರ್ ಜೋಡಿಯಾಗಿದ್ದಾರೆ.ಶ್ರೀ

‘ಟಗರು’, ‘ಸಲಗ’ ಹಾಗೂ ‘ಯುಐ’ ಚಿತ್ರಗಳನ್ನು ನಿರ್ಮಿಸಿರುವ ಕೆ.ಪಿ.ಶ್ರೀಕಾಂತ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ಎರಡು ಹಂತದ ಚಿತ್ರೀಕರಣ ಮುಗಿದಿವೆ. ಮುಂದಿನ ಒಂದು ಶೆಡ್ಯೂಲ್ ಬೆಂಗಳೂರು ಹಾಗೂ ಮತ್ತೊಂದು ಮಂಗಳೂರಿನಲ್ಲಿ ನಡೆಯಲಿದೆ. ಈ ವರ್ಷ ಜೂನ್ ವೇಳೆಗೆ ಚಿತ್ರ ತೆರೆಗೆ ಬರಲಿದೆ. ಆ್ಯಕ್ಷನ್, ಮಾಸ್ ಅಂಶಗಳಿರುವ ಚಿತ್ರ’ ಎಂದಿದ್ದಾರೆ ಕೆ.ಪಿ.ಶ್ರೀಕಾಂತ್.

ಚಿತ್ರಕ್ಕೆ ‘ಸಾಯಿ ಕುಮಾರ್ ಫ್ಯಾನ್’ ಎಂಬ ಅಡಿಬರಹವಿದ್ದು, ಸಾಯಿಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಖುಷಿ’ ಚಿತ್ರದ ನಾಯಕಿ ಚೈತ್ರಾ ಹಳ್ಳಿಕೇರಿ ಈ ಸಿನಿಮಾದಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ. ರಮೇಶ್ ಇಂದಿರಾ, ಜ್ಯೋತಿ ರೈ, ಅಚ್ಯುತ್ ಕುಮಾರ್, ಓಂಪ್ರಕಾಶ್ ರಾವ್ ಮೊದಲಾದವರು ತಾರಾಬಳಗದಲ್ಲಿದ್ದಾರೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಈ ಸಿನಿಮಾ ನಿರ್ಮಾಣವಾಗುತ್ತಿದೆ. ವಿ. ಹರಿಕೃಷ್ಣ ಸಂಗೀತ, ಸತ್ಯ ಹೆಗಡೆ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.