ಗುರುವಾರ , ಮೇ 26, 2022
24 °C

’ಹುಟ್ಟುಹಬ್ಬದ ಶುಭಾಶಯಗಳು’: 38ನೇ ವರ್ಷದ ಸಂಭ್ರಮದಲ್ಲಿ ನಟ ದಿಗಂತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚಂದನವನದ ನಟ ’ದೂದ್‌ ಪೇಡ’ ಖ್ಯಾತಿಯ ನಟ ದಿಗಂತ್‌ ಅವರಿಗೆ ಇಂದು (ಡಿ.28) ಹುಟ್ಟುಹಬ್ಬದ ಸಂಭ್ರಮ.

38ನೇ ವರ್ಷದ ಜನ್ಮದಿನ ಸಂಭ್ರಮದಲ್ಲಿರುವ ದಿಗಂತ್‌ ಅವರಿಗೆ ಅಭಿಮಾನಿಗಳು ಸೇರಿದಂತೆ ಚಂದನವನದ ನಟ, ನಟಿಯರು ತಂತ್ರಜ್ಞರು ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. 

ದಿಗಂತ್‌ ಪತ್ನಿ ನಟಿ ಐಂದ್ರಿತಾ ರೈ ಕೂಡ ಜನ್ಮದಿನದ ಶುಭಾಶಯ ಹೇಳಿದ್ದಾರೆ. ಚಂದನವನದಲ್ಲಿ ಸಕ್ರಿಯರಾಗಿರುವ ಅವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಂದಹಾಗೆ, ‘ಮುಂಗಾರು ಮಳೆ’, ‘ಗಾಳಿಪಟ’, ‘ಮನಸಾರೆ’, ‘ಪಂಚರಂಗಿ’ ಚಿತ್ರಗಳು ಅವರಿಗೆ ಯಶಸ್ಸು ತಂದುಕೊಟ್ಟ ಸಿನಿಮಾಗಳು. 

ಸದ್ಯ ದಿಗಂತ್‌ ಅವರ ’ಹುಟ್ಟುಹಬ್ಬದ ಶುಭಾಶಯಗಳು’ ಸಿನಿಮಾ ಡಿಸೆಂಬರ್‌ 31ರಂದು ತೆರೆಗೆ ಬರಲಿದೆ. ಚಿತ್ರಕ್ಕೆ ನಾಗರಾಜ್ ಬೇತೂರು ನಿರ್ದೇಶನವಿದೆ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಈ ಚಿತ್ರಕ್ಕೆ ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು