ಮುಂಬೈ: ಬಾಲಿವುಡ್ ಖ್ಯಾತ ನಿರ್ದೇಶಕಕರಣ್ ಜೋಹರ್ ಇಂದು (ಮೇ 25)48ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಕರಣ್ ಜೋಹರ್ ತಮ್ಮ ಹುಟ್ಟುಹಬ್ಬವನ್ನುಮನೆಯಲ್ಲಿ ಸರಳವಾಗಿ ಆಚರಿಸಿಕೊಂಡಿದ್ದಾರೆ. ತಾಯಿ ಮತ್ತು ಮಕ್ಕಳ ಜೊತೆ ಜನ್ಮದಿನ ಆಚರಿಸಿಕೊಂಡಿರುವಫೋಟೊವನ್ನು ಕರಣ್ ಟ್ವೀಟ್ ಮಾಡಿದ್ದಾರೆ.

ಬಾಲವುಡ್‌ನ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳನ್ನು ಕೋರಿದ್ದಾರೆ.

2001ರಲ್ಲಿ ತೆರೆಗೆ ಬಂದ ಸೂಪರ್ ಹಿಟ್ ಚಿತ್ರಗಳ ಸಾಲಿನಲ್ಲಿ ಎದ್ದು ಕಾಣುವ ಹೆಸರು ‘ಕಭಿ ಖುಷಿ ಕಭಿ ಗಮ್’. ನಿರ್ದೇಶಕ ಕರಣ್ ಜೋಹರ್ ಅವರಿಗೆ ‘ಕುಚ್ ಕುಚ್ ಹೋತಾ ಹೈ’ ನಂತರ ದೊಡ್ಡ ಯಶಸ್ಸು ತಂದುಕೊಟ್ಟ ಸಿನಿಮಾ ಕೂಡ ಹೌದು ಇದು. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶಾರೂಖ್ ಖಾನ್, ಕಾಜಲ್, ಹೃತಿಕ್ ರೋಷನ್, ಕರೀನಾ ಕಪೂರ್ ಈ ಚಿತ್ರದ ತಾರಾಬಳದಲ್ಲಿ ಇದ್ದರು.

ಇತ್ತೀಚೆಗೆ ಕರಣ್ ‘ಎನ್ ಅನ್‌ಸೂಟಬಲ್ ಬಾಯ್’ಎಂಬ ಪುಸ್ತಕವನ್ನು ಬರೆದಿದ್ದಾರೆ. ಸಿನಿಮಾ ಸೆಟ್‌ನಲ್ಲಿ ನಡೆದ ಘಟನೆಗಳ ಸುತ್ತ ಈ ಪುಸ್ತಕ ಬೆಳಕು ಚಲ್ಲುತ್ತದೆ. ತೆರೆಯ ಮೇಲೆ ಒಬ್ಬರಿಗಾಗಿ ಒಬ್ಬರು ಕಂಬನಿ ಮಿಡಿಯುತ್ತಿದ್ದ ಕಲಾವಿದರು, ಸಿನಿಮಾ ಸೆಟ್‌ನಲ್ಲಿ ಮುಖ ತಿರುಗಿಸಿಕೊಂಡು ಕುಳಿತಿರುತ್ತಿದ್ದ ಸಂದರ್ಭಗಳೂ ಇದ್ದವು ಎಂಬುದನ್ನು ಕರಣ್ ಈಗ ಬಹಿರಂಗಪಡಿಸಿರುವುದು ಬಾಲಿವುಡ್ ಅಂಗಳದಲ್ಲಿ ದೊಡ್ಡ ಸುದ್ದಿ ಮಾಡಿದೆ.

‘ಕಭಿ ಖುಷಿ ಕಭಿ ಗಮ್‘ ಚಿತ್ರದ ಸೆಟ್‌ನಲ್ಲಿ ಹಿರಿಯ ಕಲಾವಿದರಿಂದ ಉಪೇಕ್ಷೆಗೆ ಒಳಗಾದ ವ್ಯಕ್ತಿ ಹೃತಿಕ್ ಎಂಬ ಸಂಗತಿಯನ್ನು ಹೃತಿಕ್ ಅವರನ್ನು ಹಿರಿಯ ಕಲಾವಿದರು ಮಾತನಾಡಿಸದೆ ಇರಲು ಕಾರಣ, ಕಹೋನಾ ಪ್ಯಾರ್ ಹೈ ಚಿತ್ರದಲ್ಲಿ ಹೃತಿಕ್‌ಗೆ ದಕ್ಕಿದ ಯಶಸ್ಸು! ಆ ಸಂದರ್ಭದಲ್ಲಿ, ಶಾರೂಖ್ ಅವರ ಕೆಲವು ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತಿದ್ದವು. ಹಾಗಾಗಿ, ಕೆಲವರು ಹೃತಿಕ್ ಅವರನ್ನು ‘ಬಾಲಿವುಡ್‌ನ ಮುಂದಿನ ಬಾದ್‌ಶಾ’ ಎಂದು ಕರೆದಿದ್ದೂ ಇತ್ತು.

ಇವೆಲ್ಲವೂ, ಚಿತ್ರದ ಸೆಟ್‌ನಲ್ಲಿ ಹೃತಿಕ್ ಅವರು ಹಿರಿಯ ಕಲಾವಿದರಿಂದ ಕಡೆಗಣನೆಗೆ ಒಳಗಾಗಲು ಕಾರಣವಾದವು.

ಶಾರೂಖ್ ಆ ವೇಳೆಗಾಗಲೇ ಬಹುದೊಡ್ಡ ಸ್ಟಾರ್ ಆಗಿದ್ದರು. ಆದರೆ, ಆ ಸಂದರ್ಭದಲ್ಲಿ ಶಾರೂಖ್ ಅವರ ಒಂದೆರಡು ಸಿನಿಮಾಗಳು ಸೋಲು ಕಂಡಿದ್ದವು. ಮಾಧ್ಯಮಗಳು ಶಾರೂಖ್ ಜಾಗದಲ್ಲಿ ಹೃತಿಕ್ ಅವರನ್ನು ತೋರಿಸಲು ಶುರು ಮಾಡಿದ್ದವು’ ಎಂದು ಕರಣ್ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.