ಶನಿವಾರ, ಅಕ್ಟೋಬರ್ 23, 2021
20 °C
ಅ.15 ಕ್ಕೆ ಬಿಡುಗಡೆ

ಕ್ರಿಕೆಟರ್ ಹರ್ಭಜನ್ ಸಿಂಗ್ ಅಭಿನಯದ ತಮಿಳು ಸಿನಿಮಾ ಅಮೆಜಾನ್ ಪ್ರೈಂನಲ್ಲಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕ್ರಿಕೆಟರ್ ಹರ್ಭಜನ್ ಸಿಂಗ್ ಅಭಿನಯಿಸಿ ಗಮನ ಸೆಳೆದಿರುವ ತಮಿಳು ಸಿನಿಮಾ 'ಫ್ರೆಂಡ್‌ಶಿಪ್‘ ಇದೆ ಅ. 15 ಕ್ಕೆ ಅಮೆಜಾನ್ ಪ್ರೈಂನಲ್ಲಿ ಲಭ್ಯವಾಗಲಿದೆ.

ಇಂದು ಟ್ವಿಟರನಲ್ಲಿ ಹರ್ಭಜನ್ ಸಿಂಗ್ ಈ ವಿಚಾರವನ್ನು ಹಂಚಿಕೊಂಡು, ಫ್ರೆಂಡ್‌ಶಿಪ್ ಸಿನಿಮಾ ನೋಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಕ್ರೀಡೆ, ಗೆಳೆತನ, ರಾಜಕೀಯ ಹಾಗೂ ಕ್ರೈಂ ಕಥೆಯನ್ನು ಹೊಂದಿರುವ ಈ ಸಿನಿಮಾದಲ್ಲಿ ಹರ್ಭಜನ್ ಸಿಂಗ್ ಪೂರ್ಣ ಪ್ರಮಾಣದಲ್ಲಿ ಅಭಿನಯಿಸಿದ್ದಾರೆ. ಜೊತೆಗೆ ಅರ್ಜುನ್ ಸರ್ಜಾ, ಲೋಸ್ಲಿಯಾ ಮರಿಯಾಸೇನ್, ರಾಬಿನ್ ಪ್ರಭು ಅಭಿನಯಿಸಿರುವ ಈ ಚಿತ್ರ ಕಳೆದ ಸೆ. 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆ ಗಳಿಸಿತ್ತು.

ಮೂಲತಃ ಮಲೆಯಾಳಂ 'ಕ್ವೀನ್' ಸಿನಿಮಾದ ರಿಮೇಕ್ ಆದ ಫ್ರೆಂಡ್‌ಶಿಪ್ ಸಿನಿಮಾವನ್ನು ತಮಿಳಿನಲ್ಲಿ ಜಾನ್ ಪೌಲ್ ರಾಜ್ ಹಾಗೂ ಶಾಮ್ ಸೂರ್ಯಾ ನಿರ್ದೇಶಿಸಿದ್ದಾರೆ. ಜೆಪಿಆರ್ ಹಾಗೂ ಸ್ಟ್ಯಾಲಿನ್ ಬಂಡವಾಳ ಹೂಡಿದ್ದಾರೆ.

 

ಸಿನಿಪ್ರಿಯರು ಹಾಗೂ ಹರ್ಭಜನ್ ಸಿಂಗ್ ಅಭಿಮಾನಿಗಳು ಈ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜೊತೆ ಗುರುತಿಸಿಕೊಂಡಿದ್ದ ಸಿಂಗ್, ತಮಿಳುನಾಡು ಹಾಗೂ ತಮಿಳು ಭಾಷೆ ಜೊತೆ ವಿಶೇಷ ನಂಟು ಹೊಂದಿದ್ದಾರೆ. ಈ ಮೂಲಕ ಅವರು ತಮಿಳುನಾಡಿನಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದೀಗ ಸಿನಿಮಾ ಮೂಲಕವೂ ಅವರು ತಮಿಳಿಗರ ಮನ ಗೆದ್ದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು