ಮಂಗಳವಾರ, ನವೆಂಬರ್ 12, 2019
25 °C

ಕಾಲಿವುಡ್‌ಗೆ ಹರ್ಭಜನ್‌ ಸಿಂಗ್‌

Published:
Updated:
Prajavani

ಕ್ರಿಕೆಟಿಗರಾದ ಹರ್ಭಜನ್ ಸಿಂಗ್‌ ಹಾಗೂ ಇರ್ಫಾನ್‌ ಪಟೇಲ್‌ ನಟನಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದು, ಹರ್ಭಜನ್‌ ಕಾಲಿವುಡ್‌ನಲ್ಲಿ ‘ಡಿಕ್ಕಿಲುನಾ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 ಈ ಚಿತ್ರದಲ್ಲಿ ಸಂತಾನಂ ತ್ರಿಪಾತ್ರದಲ್ಲಿ ನಟಿಸಲಿದ್ದು, ನಾಯಕ, ವಿಲನ್‌ ಹಾಗೂ ಕಾಮಿಡಿಯನ್‌ ಆಗಿ ನಟಿಸಲಿದ್ದಾರೆ. ಈ ಸೈನ್ಸ್‌ ಫಿಕ್ಷನ್‌ ಥ್ರಿಲ್ಲರ್‌ ಸಿನಿಮಾವನ್ನು ಕಾರ್ತಿಕ್‌ ಯೋಗಿ ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರಕ್ಕೆ ಸ್ವತಃ ಹರ್ಭಜನ್ ಸಿಂಗ್‌ ಅವರೇ ಧ್ವನಿ ನೀಡಲಿದ್ದಾರೆ.

‘ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ತುಂಬ ಪ್ರಾಮುಖ್ಯತೆ ಇದೆ. ಅವರೇ ತಾವೇ ಧ್ವನಿ ನೀಡುವುದಾಗಿ ತಿಳಿಸಿದರು. ಈ ಚಿತ್ರದ ಶೂಟಿಂಗ್‌ ಮುಂದಿನ ತಿಂಗಳು ಆರಂಭವಾಗಲಿದೆ’ ಎಂದು ಚಿತ್ರದ ಮೂಲಗಳು ತಿಳಿಸಿವೆ.

ಈ ಚಿತ್ರವನ್ನು ಕೆಜೆಆರ್‌ ಸ್ಟುಡಿಯೋ ಹಾಗೂ ಸೋಲ್ಜರ್ಸ್‌ ಫ್ರಾಕ್ಟರಿ ನಿರ್ಮಾಣ ಮಾಡುತ್ತಿದೆ. ಮುಂದಿನ ವರ್ಷ ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಯುವನ್‌ ಶಂಕರ್‌ ರಾಜಾ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)