ಬುಧವಾರ, ಜನವರಿ 22, 2020
18 °C

ಮತ್ತೊಂದು ವಿವಾದಕ್ಕೆ ಸಿಲುಕಿದ ‘ಕನ್ನಡ್‌ ಗೊತ್ತಿಲ್ಲ’ ಹರಿಪ್ರಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದ್ಯಕ್ಕೆ ನಟಿ ಹರಿಪ್ರಿಯಾ ಅವರು ವಿವಾದಗಳಿಂದ ದೂರ ಉಳಿಯುವುದು ತುಸು ಕಷ್ಟವೇ ಎನ್ನುವಂತಾಗಿದೆ. ‘ಸೂಜಿದಾರ’ ಚಿತ್ರದಲ್ಲಿ ನಟಿಸಿದ್ದ ಈಗ ಬಿಗ್‌ಬಾಸ್‌ ಸ್ಪರ್ಧಿಯಾಗಿರುವ ಚೈತ್ರಾ ಕೋಟೂರು ಮತ್ತು ಹರಿಪ್ರಿಯಾ ನಡುವೆ ನಡೆದ ವಾಕ್ಸಮರ ಎಲ್ಲರಿಗೂ ಗೊತ್ತಿದೆ.

ಈಗ ‘ಕನ್ನಡ್‌ ಗೊತ್ತಿಲ್ಲ’ ಚಿತ್ರದ ನಿರ್ದೇಶಕ ಮಯೂರ ರಾಘವೇಂದ್ರ ಅವರು ಹರಿಪ್ರಿಯಾ ಬಗ್ಗೆ ಫೇಸ್‌ಬುಕ್‌ನಲ್ಲಿ ಅಸಮಾಧಾನ ತೋಡಿಕೊಂಡಿರುವುದು ವೈರಲ್‌ ಆಗಿದೆ.

‘ನನ್ನ ಚಿತ್ರದ ಪ್ರಮುಖ ಪಾತ್ರಧಾರಿ(ಹರಿಪ್ರಿಯಾ) ಪ್ರಚಾರಕ್ಕೆ ಬರಲಿಲ್ಲ. ಆದರೂ ಚಿತ್ರದ ಉಳಿದ ನಟರು, ನಿರ್ಮಾಪಕರು, ತಂತ್ರಜ್ಞರು ನನ್ನ ಬೆಂಬಲಕ್ಕೆ ನಿಂತರು. ಅವರ ಸಹಕಾರದಿಂದ ಕನ್ನಡ್‌ ಗೊತ್ತಿಲ್ಲ ಚಿತ್ರ 25 ದಿನಗಳನ್ನು ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ನಾನು ಆಭಾರಿಯಾಗಿದ್ದೇನೆ’ ಎಂದು ಮಯೂರ ರಾಘವೇಂದ್ರ ಬರೆದುಕೊಂಡಿದ್ದಾರೆ.

‘ನೀವು(ಮಯೂರ ರಾಘವೇಂದ್ರ) ಸಿನಿಮಾ ರಂಗಕ್ಕೆ ಹೊಸಬರು. ಆದರೆ, ಚಿತ್ರದ ಪ್ರಮುಖ ಪಾತ್ರಧಾರಿ ಖ್ಯಾತನಾಮರಾಗಿದ್ದಾರೆ. ಇಂತಹ ಅವಾಂತರಕ್ಕೆ ಅವರ ಮನೋಧರ್ಮವೇ ಕಾರಣ. ಇದರ ಬಗ್ಗೆ ನೀವು ಚಿಂತಿಸಬೇಕಿಲ್ಲ. ಕಾಲವೇ ಇದಕ್ಕೆ ಉತ್ತರ ನೀಡಲಿದೆ’ ಎಂದು ಮಯೂರ ರಾಘವೇಂದ್ರ ಅವರ ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು