ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ ಪಟಾನಿ, ಟೈಗರ್‌ ಶ್ರಾಫ್‌ ಲವ್‌ ಫೇಲ್ಯೂರ್‌: 6 ವರ್ಷದ ಪ್ರೀತಿಗೆ ಏನಾಯ್ತು?

ಅಕ್ಷರ ಗಾತ್ರ

ಬಾಲಿವುಡ್‌ನ ಹಾಟ್‌ ಜೋಡಿ ಹಕ್ಕಿ ಎಂದೇ ಖ್ಯಾತಿಯಾಗಿದ್ದ ನಟಿ ದಿಶಾ ಪಟಾನಿಹಾಗೂ ನಟ ಟೈಗರ್‌ ಶ್ರಾಫ್ ತಮ್ಮ 6 ವರ್ಷಗಳ ಪ್ರೀತಿಗೆ ಅಂತ್ಯ ಹಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ಬಾಲಿವುಡ್‌ ಮಾಧ್ಯಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಇಬ್ಬರು ಪರಸ್ಪರ ದೂರವಾಗಿದ್ದು ಪ್ರತ್ಯೇಕವಾಗಿ ವಾಸವಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ 6 ವರ್ಷಗಳಿಂದ ಟೈಗರ್‌ ಮತ್ತು ದಿಶಾ ಪ್ರೀತಿಸುತ್ತಿದ್ದರು. ಈ ಜೋಡಿ ಮುಂಬೈನ ಖಾಸಗಿ ಅ‍ಪಾರ್ಟ್‌ಮೆಂಟ್‌ನಲ್ಲಿ ಒಟ್ಟಿಗೆ ವಾಸವಾಗಿತ್ತು. ಟೈಗರ್‌ ಕುಟುಂಬಕ್ಕೆ ಆಪ್ತವಾಗಿದ್ದ ದಿಶಾ ಕೂಡ ಹೆಚ್ಚಿನ ದಿನಗಳನ್ನು ಅಲ್ಲಿಯೇ ಕಳೆಯುತ್ತಿದ್ದರು.

ದಿಶಾ ಮತ್ತು ಟೈಗರ್‌ ಬ್ರೇಕಪ್‌ ಮಾಡಿಕೊಂಡಿರುವುದಕ್ಕೆ ಕಾರಣಗಳು ತಿಳಿದಿಲ್ಲ. ಆದರೆ ಅವರು ಪರಸ್ಪರ ದೂರವಾಗಿರುವುದು ನಿಜ ಎಂದು ದಿಶಾ ಪಟಾನಿಆಪ್ತರು ಹೇಳಿದ್ದಾರೆ. ಆರು ವರ್ಷಗಳ ಪ್ರೀತಿಗೆ ಏನಾಯ್ತು? ಎಂದು ಅಭಿಮಾನಿಗಳು ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಅಚ್ಚರಿಯ ವಿಷಯವೆಂದರೆ, 6 ವರ್ಷಗಳಿಂದ ಅವರು ಒಟ್ಟಿಗೆ ಇದ್ದರೂ ಎಲ್ಲಿಯೂ ಸಹ ನಾವು ಪ್ರೇಮಿಗಳು ಎಂದು ಹೇಳಿಕೊಂಡಿರಲಿಲ್ಲ. ಫ್ಲಾಟ್‌ನಲ್ಲಿ ಒಂದು ವರ್ಷದಿಂದ ಅವರು ಸರಿಯಾಗಿ ಇರಲಿಲ್ಲ, ಪದೇ ಪದೇ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ ಎಂದು ಪಿಂಕ್‌ವಿಲ್ಲಾ ವೆಬ್‌ಸೈಟ್‌ (ಹಿಂದಿ) ವರದಿ ಮಾಡಿದೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ದಿಶಾ ಮತ್ತು ಟೈಗರ್‌ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ದಿಶಾ ಪಟಾನಿ ಅಭಿನಯದ 'ಏಕ್‌ ವಿಲನ್ ರಿಟರ್ನ್ಸ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತ ಟೈಗರ್ ಶ್ರಾಫ್ ಅಭಿನಯದ 'ಸ್ಕ್ರೂ ಧೀಲಾ' ಸಿನಿಮಾದ ಶೂಟಿಂಗ್‌ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT