ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೈಡ್‌ ಆ್ಯಂಡ್‌ ಸೀಕ್‌’ನಲ್ಲಿ ಅನೂಪ್‌–ಧನ್ಯಾ ರಾಮ್‌ಕುಮಾರ್‌

Published 14 ಮಾರ್ಚ್ 2024, 23:30 IST
Last Updated 14 ಮಾರ್ಚ್ 2024, 23:30 IST
ಅಕ್ಷರ ಗಾತ್ರ
ಅನೂಪ್‌ ರೇವಣ್ಣ, ಧನ್ಯಾ ರಾಮ್‌ಕುಮಾರ್‌ ನಟನೆಯ ‘ಹೈಡ್‌ ಆ್ಯಂಡ್‌ ಸೀಕ್‌’ ಸಿನಿಮಾ ಇಂದು ತೆರೆ ಕಾಣುತ್ತಿದೆ. ಚಿತ್ರದ ಕುರಿತು ನಾಯಕ ಅನೂಪ್‌ ಒಂದಷ್ಟು ವಿಷಯ ಹಂಚಿಕೊಂಡರು...

‘ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದು ಅಪಹರಣದ ಕಥೆ ಹೊಂದಿದೆ. ಇದರಲ್ಲಿ ಅಪಹರಣಕಾರನ ಪಾತ್ರ ಮಾಡಿದ್ದೇನೆ. ನಾಯಕ ಚಿತ್ರದಲ್ಲಿ ಖಳನಾಯಕನೂ ಹೌದು. ಕ್ರಿಮಿನಲ್‌ಗಳ ತಂಡದಲ್ಲಿ ಕೆಲಸ ಮಾಡುವವನು. ಹೀಗಾಗಿ ನನ್ನ ಪಾತ್ರಕ್ಕೆ ಪಾಸಿಟಿವ್‌ ಮತ್ತು ನೆಗೆಟಿವ್‌ ಅಂಶಗಳೆರಡೂ ಇರುತ್ತವೆ’ ಎಂದು ಪಾತ್ರದ ಕುರಿತು ವಿವರಿಸಿದರು ಅನೂಪ್‌.

‘ಲಕ್ಷ್ಮಣ’ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅನೂಪ್‌ಗಿದು ನಾಲ್ಕನೆ ಚಿತ್ರ. ಪುನೀತ್‌ ನಾಗರಾಜು ನಿರ್ದೇಶನದ ಈ ಚಿತ್ರದ ಮೂಲಕ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ. ‘ಸಸ್ಪೆನ್ಸ್‌ ಥ್ರಿಲ್ಲರ್‌ ಜಾನರ್‌ನ ಈ ಸಿನಿಮಾದಲ್ಲಿ ಚಿತ್ರಕಥೆ, ಮನರಂಜನೆಯೇ ಬಂಡವಾಳ. ಯಾವುದೇ ಸಂದೇಶ ನೀಡುವ ಚಿತ್ರವಲ್ಲ. ರಿವರ್ಸ್‌ ಸ್ಕ್ರೀನ್‌ಪ್ಲೆ ಮೂಲಕ ವಿಭಿನ್ನವಾಗಿರುವುದನ್ನು ಪ್ರಯತ್ನಿಸಿದ್ದೇವೆ. ಹೀಗಾಗಿ ಜನಕ್ಕೆ ಇಷ್ಟವಾಗಬಹುದೆಂಬ ನಿರೀಕ್ಷೆಯಿದೆ’ ಎಂದು ವಿಶ್ವಾಸದಿಂದಲೇ ಹೇಳಿದರು.

‘ಕಿಲ್ಲಿಂಗ್‌ ವೀರಪ್ಪನ್‌’ ಖ್ಯಾತಿಯ ಸಂಗೀತ ನಿರ್ದೇಶಕ ಸ್ಯಾಂಡಿ ಅವರ ಸಂಗೀತ ಈ ಚಿತ್ರಕ್ಕಿದೆ. ಹಿನ್ನೆಲೆ ಸಂಗೀತ ಚಿತ್ರವನ್ನು ಮತ್ತೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬ ಲೆಕ್ಕಾಚಾರ ತಂಡದ್ದು. ‘ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಳ್ಳಬೇಕು. ಒಳ್ಳೆ ಸಿನಿಮಾ ಮಾಡಿದ್ದೇವೆ ಎಂಬ ಸಾರ್ಥಕ ಭಾವ ಬೇಕು. ‘ಲಾಡರ್ಸ್‌ ಆಫ್‌ ಲಂಕಾ’ ನನ್ನ ಮುಂದಿನ ಚಿತ್ರ. ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇನ್ನೊಂದೆರಡು ಚಿತ್ರಗಳು ಮಾತುಕತೆ ಹಂತದಲ್ಲಿವೆ’ ಎಂದು ಮುಂದಿನ ಯೋಜನೆಗಳ ಅವರು ಮಾಹಿತಿ ಹಂಚಿಕೊಂಡರು. 

ಅನೂಪ್‌ ಧನ್ಯಾ
ಅನೂಪ್‌ ಧನ್ಯಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT