ಶನಿವಾರ, ಏಪ್ರಿಲ್ 1, 2023
32 °C

ಹಾಲಿವುಡ್‌ ನಟ ಜೂಲಿಯನ್‌ ಸ್ಯಾಂಡ್ಸ್‌ ನಾಪತ್ತೆ: ಮುಂದುವರೆದ ಕಾರ್ಯಾಚರಣೆ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕ್ಯಾಲಿಪೋರ್ನಿಯಾ: ಹಾಲಿವುಡ್‌ ನಟ ಜೂಲಿಯನ್‌ ಸ್ಯಾಂಡ್ಸ್‌ ದಕ್ಷಿಣ ಕ್ಯಾಲಿಪೋರ್ನಿಯಾದ ಸ್ಯಾನ್‌ ಗೆಬ್ರಿಯಲ್‌ ಪರ್ವತ ಪ್ರದೇಶಗಳಲ್ಲಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

65 ವರ್ಷದ ನಟ ಕಳೆದ ಬುಧವಾರ (ಜ.11) ಸ್ಯಾನ್‌ ಗೆಬ್ರಿಯಲ್‌ ಪರ್ವತ ಪ್ರದೇಶಕ್ಕೆ ತೆರಳಿದ್ದರು. ಆದರೆ ಅವರು ಇದುವರೆಗೂ ಹಿಂತಿರುಗಿಲ್ಲ ಎಂದು ಅವರ ಪತ್ನಿ ಜನವರಿ 13ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಪ್ರದೇಶದಲ್ಲಿ ವ್ಯಾಪಕವಾಗಿ ಹಿಮ ಸುರಿಯುತ್ತಿದೆ ಎಂದು ಮಾಧ್ಯಮಗಳು ಹೇಳಿವೆ.

ಜೂಲಿಯನ್‌ ಸ್ಯಾಂಡ್ಸ್‌ ಪತ್ತೆಗಾಗಿ ಅಮೆರಿಕ ಪೊಲೀಸರು ಕಳೆದ 24ಗಂಟೆಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಚರಣೆ ತೊಂದರೆಯಾಗುತ್ತಿದೆ. ಶೋಧಕಾರ್ಯ ಮುಂದುವರೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

ಜೂಲಿಯನ್‌ ಸ್ಯಾಂಡ್ಸ್‌ ಅವರು ನಟಿಸಿರುವ ‘ವಾರ್‌ಲಾಕ್‌‘ ಹಾಗೂ ‘ಎ ರೂಮ್‌ ವ್ಯೂ‘ ಸಿನಿಮಾಗಳು ಪ್ರಸಿದ್ಧ ಹಾಲಿವುಡ್‌ ಚಿತ್ರಗಳು. ಈ ಸಿನಿಮಾಗಳು ಆಸ್ಕರ್‌ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು