ಅನುಷ್ಕಾ ಜತೆ ಹಾಲಿವುಡ್‌ ನಟ!

7

ಅನುಷ್ಕಾ ಜತೆ ಹಾಲಿವುಡ್‌ ನಟ!

Published:
Updated:

ದಕ್ಷಿಣ ಭಾರತದ ತಾರಾ ನಟಿ ಅನುಷ್ಕಾ ‘ಭಾಗಮತಿ’ ಚಿತ್ರದ ನಂತರ, ಸಿನಿ ಜೀವನಕ್ಕೆ ಅಲ್ಪ ವಿರಾಮ ನೀಡಿದ್ದರು. ಬಾಹುಬಲಿ ಚಿತ್ರದ ಬಳಿಕ ಅವರು ನಟಿಸಿದ್ದು ಇದೊಂದೇ ಚಿತ್ರದಲ್ಲಿ.

ಪ್ರಸ್ತುತ, ಚಿತ್ರ ಸಾಹಿತಿ ಕೋನವೆಂಕಟ್‌ ಅರ್ಪಿಸುತ್ತಿರುವ, ಟಾಲಿವುಡ್ ನಿರ್ದೇಶಕ ಹೇಮಂತ್ ಮಧುಕರ್‌ ನಿರ್ದೇಶನದ ಚಿತ್ರವೊಂದರಲ್ಲಿ ಅನುಷ್ಕಾ ನಟಿಸುತ್ತಿದ್ದಾರೆ. ಈಚೆಗಷ್ಟೇ ಈ ಚಿತ್ರದ ಫಸ್ಟ್‌ ಲುಕ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಯೂ ವ್ಯಕ್ತವಾಗಿದೆ. 

ಚಿತ್ರಕ್ಕೆ ಇನ್ನೂ ಹೆಸರಿಡದಿದ್ದರೂ ‘ಸೈಲೆಂಟ್‌’ ಎಂಬ ಶೀರ್ಷಿಕೆ ಇಡುವುದಾಗಿ ಚಿತ್ರತಂಡ ಹೇಳಿದೆ. ಚಿತ್ರದ ಬಗ್ಗೆ ಮಾತನಾಡಿದ್ದ ಕೋನವೆಂಕಟ್‌, ಈ ಚಿತ್ರದಲ್ಲಿ ಹಾಲಿವುಡ್ ನಟರು ಕೂಡ ನಟಿಸುವ ಸಾಧ್ಯತೆ ಇದೆ ಎಂದು ಹೇಳಿದ್ದರು. ಈ ದಿಸೆಯಲ್ಲಿ ಪ್ರಯತ್ನಗಳು ಮೊದಲಾದಂತೆ ಕಾಣುತ್ತಿವೆ.

ಖ್ಯಾತ ಹಾಲಿವುಡ್ ನಟ ಮೈಕೆಲ್ ಮ್ಯಾಡ್ಸೆನ್‌ ಅವರು ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹಲವು ವರ್ಷಗಳಿಂದ ಮಾಡ್ಸೆನ್‌ ಅವರು ಭಾರತೀಯ ಚಿತ್ರರಂಗದಲ್ಲಿ ಬಣ್ಣ ಹಚ್ಚಲು ಆಸಕ್ತಿ ತೋರುತ್ತಿದ್ದಾರೆ. ಅವರ ಇಂಗಿತವನ್ನು ಅರಿತಿಕೊಂಡಿರುವ ಈ ಚಿತ್ರತಂಡ ಅವರೊಂದಿಗೆ ಮಾತನಾಡಿಸಿದೆಯಂತೆ. ಅಲ್ಲದೇ ಅವರಿಗೆ ₹3 ಕೋಟಿ ಸಂಭಾವನೆ ನೀಡುವುದಕ್ಕೂ ಚಿತ್ರ ತಂಡ ಈಗಾಗಲೇ ಒಪ್ಪಿಗೆ ನೀಡಿದೆ. 

ಅನುಷ್ಕಾ ಅವರಿಗೆ ತೆಲುಗು ಮತ್ತು ತಮಿಳು ಚಿತ್ರರಂಗಗಳೆರಡರಲ್ಲೂ ಅವರಿಗೆ ಅಭಿಮಾನಿಗಳು ಇರುವುದರಿಂದ, ಈ ಚಿತ್ರವನ್ನು ತೆಲುಗು ಮತ್ತು ತಮಿಳು ಭಾಷೆಗಳೆರಡರಲ್ಲೂ ತೆರೆಕಾಣಿಸಲು ಚಿತ್ರತಂಡ ಯೋಚಿಸುತ್ತಿದೆ. ಖ್ಯಾತ ನಟ ಮಾಧವನ್ ಕೂಡ ಈ ಚಿತ್ರದ ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಇತ್ತ ಗ್ಲಾಮರಸ್‌ ಪಾತ್ರಗಳಿಗೆ ಮತ್ತು ನಾಯಕಿ ಪ್ರಧಾನ ಕಥೆಯಿರುವ ಚಿತ್ರಗಳಲ್ಲಿ ಅನುಷ್ಕಾ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಹೀಗಾಗಿಯೇ ಈ ಚಿತ್ರದ ಬಗ್ಗೆ ಕುತೂಹಲ ಕೆರಳಿದೆ.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !