ಸೋಮವಾರ, ಮೇ 23, 2022
21 °C

ಹೊಂಬಾಳೆ ಫಿಲ್ಮ್ಸ್‌: ಜನವರಿಯಲ್ಲಿ ಸೆಟ್ಟೇರಲಿದೆ ‘ಸಾಲಾರ್’‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅದ್ಧೂರಿ ಸಿನಿಮಾಗಳನ್ನು ನೀಡಿರುವ ‘ಹೊಂಬಾಳೆ ಫಿಲಂಸ್’ ಸಂಸ್ಥೆಯ ಮತ್ತೊಂದು ಪ್ಯಾನ್‌ ಇಂಡಿಯಾ ಸಿನಿಮಾದ ನೀಡಲು ಸಜ್ಜಾಗಿದೆ. ಚಿತ್ರದ ಹೆಸರು ‘ಸಾಲಾರ್’.‌ ಬುಧವಾರ ಈ ಚಿತ್ರ ನಿರ್ಮಿಸುತ್ತಿರುವ ಬಗ್ಗೆ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಘೋಷಿಸಿದರು.

ಪ್ರಶಾಂತ್‌ ನೀಲ್‌ ನಿರ್ದೇಶನದಲ್ಲಿ ವಿಜಯ್‌ ಕಿರಗಂದೂರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಟಾಲಿವುಡ್‌ನಲ್ಲಿ ‘ಬಾಹುಬಲಿ’ ಹಿಟ್ ಸಿನಿಮಾ ನೀಡಿರುವ ಪ್ರಭಾಸ್‌ ನಾಯಕನಾಗಿದ್ದಾರೆ.  ಮುಂದಿನ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. 

ಪ್ರಭಾಸ್‌ ಅವರ ‘ರಾಧೆ ಶ್ಯಾಂ’ ಬಿಡುಗಡೆಯ ನಂತರ ಈ ಚಿತ್ರದ ಬಿಡುಗಡೆ ಮಾಡುವುದಾಗಿ ಹೊಂಬಾಳೆ ಫಿಲ್ಮ್ಸ್‌ನ ಮುಖ್ಯಸ್ಥ ವಿಜಯ್‌ ಕಿರಗಂದೂರು ಹೇಳಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ನ ಕೆಜಿಎಫ್‌ ಚಾಪ್ಟರ್‌ 1 ಈಗಾಗಲೇ ಸೂಪರ್‌  ಹಿಟ್‌ ಆಗಿತ್ತು. ಚಾಪ್ಟರ್‌ -2 ಬಿಡುಗಡೆಯ ಹಂತದಲ್ಲಿದೆ. ಈ ಚಿತ್ರದ ಯಶಸ್ಸಿನ ಬಗೆಗೂ ನಿರೀಕ್ಷೆ ಹೊಂದಿರುವ ಚಿತ್ರತಂಡ ಅದೇ ಉತ್ಸಾಹದಲ್ಲಿ ಹೊಸ ಯೋಜನೆಗೆ ಸಿದ್ಧತೆ ನಡೆಸಿದೆ. ಅಂದಹಾಗೆ ಈ ಚಿತ್ರ ಎಲ್ಲ ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. 

 2014ರಲ್ಲಿ ‘ನಿನ್ನಿಂದಲೇ’ ಸಿನಿಮಾ ಮೂಲಕ ಆರಂಭವಾದ ಹೊಂಬಾಳೆ ಫಿಲ್ಮ್ಸ್‌ ಈ ಕ್ಷೇತ್ರಕ್ಕೆ ಕಾಲಿರಿಸಿತ್ತು. ‘ಮಾಸ್ಟರ್ ಪೀಸ್’, ‘ರಾಜಕುಮಾರ’, ‘ಕೆಜಿಎಫ್‌ ಚಾಪ್ಟರ್‌ -1’ ಹಾಗೂ ಬಿಡುಗಡೆಯ ಹೊಸ್ತಿಲಿನಲ್ಲಿರುವ ‘ಕೆಜಿಎಫ್– ಚಾಪ್ಟರ್‌ 2, ‘ಯುವರತ್ನ’ ವರೆಗೂ ಸಾಗಿ ಬಂದಿದೆ. ಈ ಸಂಸ್ಥೆ ಏಳು ವರ್ಷಗಳಲ್ಲಿ ಏಳು ಸಿನಿಮಾಗಳನ್ನು ನಿರ್ಮಿಸಿದೆ. ಇದರಲ್ಲಿ ಮೂರು ಪ್ಯಾನ್ ಇಂಡಿಯಾ ಚಿತ್ರಗಳು ಎನಿಸಿಕೊಂಡಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು