ಬುಧವಾರ, ಸೆಪ್ಟೆಂಬರ್ 22, 2021
27 °C

'ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ' ಕೂತೂಹಲ ಮೂಡಿಸಿದ ಹೊಂಬಾಳೆ ಫಿಲ್ಮ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ’ ಎಂದು ಹೇಳುತ್ತಾ ಹೊಂಬಾಳೆ ಫಿಲ್ಮ್ಸ್‌ ತನ್ನ ನಿರ್ಮಾಣದ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆಯ ಸುಳಿವು ನೀಡಿದೆ. ಅಂದಹಾಗೆ ನಾಳೆ ಬೆಳಿಗ್ಗೆ 11.43ಕ್ಕೆ ಹೊಸ ಶೀರ್ಷಿಕೆ ಮತ್ತು ಫಸ್ಟ್‌ಲುಕ್‌ ಬಿಡುಗಡೆ ಆಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್‌ ಟ್ವಿಟರ್‌ನಲ್ಲಿ ಹೇಳಿಕೊಂಡಿದೆ.

ಬೆಂಕಿಯ ಉಂಗುರದ ಚಿತ್ರವನ್ನಷ್ಟೇ ಪ್ರಕಟಿಸಿ ‘ನಿನ್ನೊಳಗಿನ ಕಿಚ್ಚು ನಿನ್ನನ್ನು ಸುಡದಿರಲಿ’ ಎಂಬ ಸಾಲನ್ನು ಬರೆಯಲಾಗಿದೆ. 

ಕೆಜಿಎಫ್‌ ಚಾಪ್ಟರ್‌ 2ನ ಅಧಿಕೃತ ಬಿಡುಗಡೆಯ ದಿನಾಂಕ ಘೋಷಿಸಬಹುದೇ ಎಂಬ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಆದರೆ, ಇದೊಂದು ಹೊಸ ಯೋಜನೆಯ ಪೋಸ್ಟರ್‌ ಎಂಬ ಸುಳಿವು ನೀಡಿದೆ ಹೊಂಬಾಳೆ ಫಿಲ್ಮ್ಸ್‌.

ಈಗಾಗಲೇ ಇದೇ ಸಂಸ್ಥೆ ‘ದ್ವಿತ್ವ’ ಚಿತ್ರ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. ತ್ರಿಶಾ ಕೃಷ್ಣನ್‌ ಅವರು ಇತ್ತೀಚೆಗೆ ‘ದ್ವಿತ್ವ’ ತಂಡವನ್ನು ಸೇರಿದ್ದರು. ಪ್ರಭಾಸ್‌ ಅಭಿನಯದ ‘ಸಲಾರ್‌’ ನಿರ್ಮಾಣವೂ ಮುಂದುವರಿದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು