ಹೃತಿಕ್ ರೋಷನ್ ಹಾಗೂ ಅನುಷ್ಕಾ ಶರ್ಮಾ ಮೊದಲ ಬಾರಿಗೆ ತೆರೆಯ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಬಾಲಿವುಡ್ನಲ್ಲಿ ಜೋರಾಗಿದೆ.

ಒಂದೆರಡು ಸಿನಿಮಾಗಳಲ್ಲಿ ಈ ಜೋಡಿಗೆ ಒಟ್ಟಿಗೆ ನಟಿಸುವ ಅವಕಾಶ ಸಿಕ್ಕಿದ್ದರೂ ಡೇಟ್ಸ್ ಹೊಂದಾಣಿಕೆಯಾಗಿರಲಿಲ್ಲ. ಆದರೆ ಈಗ ಕಾಲ ಕೂಡಿಬಂದಿದೆ. ಅಮಿತಾಭ್ ಬಚ್ಚನ್ ಅಭಿನಯದ ‘ಸತ್ತೇ ಪೆ ಸತ್ತಾ‘ ಸಿನಿಮಾದ ರಿಮೇಕ್ನಲ್ಲಿ ಈ ಜೋಡಿ ನಟಿಸಲಿದೆ. ಫರ್ಹಾ ಖಾನ್ ಮತ್ತು ರೋಹಿತ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ.

ಈ ಸಿನಿಮಾಕ್ಕೆ ಹೃತಿಕ್ ನಾಯಕ ಎಂದು ಸಿನಿಮಾ ತಂಡ ಮೊದಲೇ ನಿರ್ಧರಿಸಿದೆ. ಈ ಕುರಿತು ಹೃತಿಕ್ ಅವರ ಡೇಟ್ಸ್ ಕೂಡ ಹೊಂದಾಣಿಕೆಯಾಗಿದೆಯಂತೆ. ನಾಯಕಿಯ ಪಾತ್ರಕ್ಕೆ ಮೊದಲು ದೀಪಿಕಾ ಪಡುಕೋಣೆ ಹೆಸರು ಕೇಳಿಬಂದಿತ್ತು. ಆದರೆ ಒಟ್ಟಿಗೆ ಮೂರು ಸಿನಿಮಾಗಳನ್ನು ಒಪ್ಪಿಕೊಂಡಿರುವ ದೀಪಿಕಾ ಬ್ಯುಸಿಯಾಗಿದ್ದಾರೆ. ಆದ್ದರಿಂದ ಈ ಅವಕಾಶ ಅನುಷ್ಕಾ ಅವರಿಗೆ ಒಲಿದಿದೆ ಎಂದು ಸಿನಿ ತಂಡ ಹೇಳಿದೆ.

ಅನುಷ್ಕಾ ಈಗಾಗಲೇ ಒಪ್ಪಿಗೆ ಸೂಚಿಸಿದ್ದಾರೆ. 2020ರಲ್ಲಿ ಶೂಟಿಂಗ್ ಆರಂಭವಾಗಲಿದೆ. 2021ಕ್ಕೆ ಬಿಡುಗಡೆ ಮಾಡುವ ನಿರೀಕ್ಷೆಯನ್ನು ಫರ್ಹಾ ವ್ಯಕ್ತಪಡಿಸಿದ್ದಾರೆ.

ಹೃತಿಕ್ ಅಭಿನಯದ ‘ವಾರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದೆ. ಆದರೆ ಅನುಷ್ಕಾ ಹಾಗೂ ಶಾರುಖ್ ಅಭಿನಯದ ‘ಜೀರೊ’ ಸಿನಿಮಾ ಸೋಲು ಕಂಡಿತ್ತು. ಆದ್ದರಿಂದ ಈ ಸಿನಿಮಾ ಮೂಲಕ ಅನುಷ್ಕಾ, ಕಮ್ ಬ್ಯಾಕ್ ಮಾಡುವ ಉದ್ದೇಶ ಹೊಂದಿದ್ದಾರೆ ಎಂಬುದು ಬಾಲಿವುಡ್ ಲೆಕ್ಕಾಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.