ವಿಕ್ರಮ ವೇದಾ ಚಿತ್ರತಂಡಕ್ಕೆ ಶೂ ಉಡುಗೊರೆ ನೀಡಿದ ಹೃತಿಕ್ ರೋಷನ್

ಬೆಂಗಳೂರು: 2017ರಲ್ಲಿ ತೆರೆಕಂಡ ತಮಿಳು ಚಿತ್ರ ‘ವಿಕ್ರಮ ವೇದಾ’ ಹಿಂದಿ ಭಾಷೆಯಲ್ಲಿ ರಿಮೇಕ್ ಆಗುತ್ತಿದೆ. ನಟ ಹೃತಿಕ್ ರೋಷನ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ.
ಯುಎಇಯ ಅಬುಧಾಬಿಯಲ್ಲಿ ವಿಕ್ರಮ ವೇದಾ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹೃತಿಕ್ ರೋಷನ್, ಚಿತ್ರತಂಡದ ಎಲ್ಲರಿಗೂ ಶೂ ಕೊಡಿಸಿದ್ದಾರೆ.
ಹೃತಿಕ್ ರೋಷನ್ ಈ ನಡೆ ಚಿತ್ರತಂಡದವರಿಗೆ ಅಚ್ಚರಿ ತಂದಿದೆ. ಜತೆಗೆ ಅವರು ಹೃತಿಕ್ ನೀಡಿರುವ ಉಡುಗೊರೆಯ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
ಈ ಮೊದಲು, ಹೃತಿಕ್ ರೋಷನ್, ‘ವಾರ್’ ಮತ್ತು ‘ಸೂಪರ್ 30’ ಚಿತ್ರೀಕರಣ ಸಂದರ್ಭದಲ್ಲೂ ತಂಡದ ಎಲ್ಲರಿಗೆ ವಿಶೇಷ ಉಡುಗೊರೆಯ ಸರ್‌ಪ್ರೈಸ್ ನೀಡಿದ್ದರು.
ಅಂದು ಮಗುವಂತೆ ಸಿಕ್ಕಳು, ಇಂದು ಅಮ್ಮನ ಸ್ಥಾನ ತುಂಬಿದಳು: ಪರಿಮಳಾಗೆ ಜಗ್ಗೇಶ್ ವಿಶ್
ಈ ಬಾರಿ ವಿಕ್ರಮ ವೇದಾ ಚಿತ್ರತಂಡ ಹೃತಿಕ್ ಕೈಯಲ್ಲಿ ಉಡುಗೊರೆ ಪಡೆದುಕೊಂಡಿದೆ.
ಶಾರ್ಟ್ಸ್ ಧರಿಸಿ ವಾಕ್: ಟ್ರೋಲ್ಗೆ ಗುರಿಯಾದ ಶಾಹಿದ್ ಕಪೂರ್ ಪತ್ನಿ ಮೀರಾ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.