ಬಾಲಿವುಡ್ ಅಂಗಣದಲ್ಲಿ ನಟ ಹೃತಿಕ್ ರೋಷನ್ ಎಂದರೆ ನೆನಪಾಗುವುದು ಅವರನೀಲಿ ಕಣ್ಣು, ಹುರಿಗೊಳಿಸಿದ ಕಟ್ಟುಮಸ್ತಾದ ಮೈಕಟ್ಟು, ಸ್ಪುರದ್ರೂಪ. ನಿಲುವಿಗೆ ತಕ್ಕಂತೆ ದೇಹದಾಕಾರವನ್ನು ಕಾಯ್ದುಕೊಂಡಿರುವ ಅವರು ಹಲವರಿಗೆ ಮಾದರಿಯೂ ಹೌದು. ಹೃದಯ ಚೋರನೂ ಕೂಡ.

ಈಗ ಇದಕ್ಕೆಲ್ಲಾ ಕಿರೀಟಪ್ರಾಯವಾಗಿ ‘ಪ್ರಪಂಚದ ಅತಿ ಸುಂದರ ವ್ಯಕ್ತಿ’ಎಂಬ ಬಿರುದಿಗೆ ಭಾಜನರಾಗಿದ್ದಾರೆ.

ಅಮೆರಿಕ ಮೂಲದ ಸಂಸ್ಥೆಯೊಂದು ಈ ಸ್ಪರ್ಧೆ ನಡೆಸಿದ್ದು,ಹೃತಿಕ್ ಅವರುಕ್ರಿಸ್ ಇವಾನ್ಸ್,ಡೇವಿಡ್ ಬೆಕ್ಹ್ಯಾಮ್,ರಾಬರ್ಟ್ ಪ್ಯಾಟಿನ್ಸನ್, ಒಮರ್ ಬೋರ್ಕನ್ ಅಲ್ ಗಾಲಾ ಇವರೆಲ್ಲರನ್ನೂ ಹಿಂದಿಕ್ಕಿದ್ದಾರೆ ಎಂದು ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹೃತಿಕ್, ಮೊಗದ ಅಂದ ಎಂದಿಗೂ ಸಾಧನೆ ಎನಿಸಿಕೊಳ್ಳುವುದಿಲ್ಲ. ಈ ಜಗತ್ತಿನಲ್ಲಿ ಹೆಚ್ಚು ಮೌಲ್ಯಯುತ ಹಾಗೂ ನಿರೀಕ್ಷಿತವಾದುದು ಉತ್ತಮ ವ್ಯಕ್ತಿತ್ವ. ಹಾಗಾಗಿ ಉತ್ತಮ ವ್ಯಕ್ತಿತ್ವ ನಮ್ಮನ್ನು ಯಾವಾಗಲೂ ಆಕರ್ಷಿತರನ್ನಾಗಿ ಮಾಡುತ್ತದೆ ಎಂದಿದ್ದಾರೆ.

ಸೂಪರ್ 30 ಸಿನಿಮಾದ ಯಶಸ್ಸಿನಲ್ಲಿರುವ ಹೃತಿಕ್ ರಾಮಾಯಣ ಸಿನಿಮಾದಲ್ಲಿರಾಮನ ಪಾತ್ರದಲ್ಲಿಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಕ್ರಿಶ್–4 ಸಿನಿಮಾದ ತಯಾರಿಯಲಿದ್ದಾರೆ.

ಇದನ್ನೂ ಓದಿ: ಸೂಪರ್ 30: ಯಶೋಗಾಥೆಯ ಎಳೆದ ಮೆಲೋಡ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.