ಬಾಲಿವುಡ್ನ ಖ್ಯಾತ ನಟ, ‘ಗ್ರೀಕ್ ಗಾಡ್’ ಎಂದೇ ಕರೆಯಲ್ಪಡುವ ‘ಹೃತಿಕ್ ರೋಷನ್’ ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಊರುಗೋಲು ಬಳಸಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ಫೋಟೊಗಳು ಚೆರ್ಚೆಗೆ ಗ್ರಾಸವಾಗಿದ್ದವು. ಈ ಫೋಟೊವನ್ನು ನೋಡಿದ ಅಭಿಮಾನಿಗಳು ನಟನಿಗೆ ಏನಾಯಿತು? ಈಗ ಹೇಗಿದ್ದೀರಿ? ಎಂಬೆಲ್ಲಾ ಕಳಕಳಿಯ ಪ್ರಶ್ನೆಗಳನ್ನು ಹಾಕಿದ್ದರು.

ಇದೀಗ ಈ ಬಗ್ಗೆ ಸ್ವತಃ ನಟ ‘ಹೃತಿಕ್ ರೋಷನ್’ ಅವರೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹೃತಿಕ್ ಅವರು ಇನ್ಸ್ಟಾಗ್ರಾಂನಲ್ಲಿ ‘ವಾರ್’ ಸಿನಿಮಾದ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಫೋಟೊದಲ್ಲಿ ಊರುಗೋಲನ್ನು ಬಳಸಿರುವುದು ಕಾಣುತ್ತದೆ. ಊರುಗೋಲು ಬಳಸಲು ಕಾರಣವೇನು ಎಂಬುದನ್ನು ಅಡಿಬರಹದಲ್ಲಿ ಹಾಸ್ಯವಾಗಿ ಬರೆದಿದ್ದಾರೆ.

‘ನಿನ್ನೆ ನನ್ನ ಎಡ ಮೊಣಕಾಲು ಎರಡು ದಿನಗಳ ಕಾಲ ರಜೆ ತೆಗೆದುಕೊಳ್ಳಲು ನಿರ್ಧರಿಸಿದೆ. ಇದರಿಂದ ದಿನವಿಡೀ ಕಿರಿಕಿರಿ ಅನುಭವಿಸಿದೆ. ನಾವೆಲ್ಲರೂ ಸಂಪೂರ್ಣವಾಗಿ ದೇಹವನ್ನು ಅರ್ಥಮಾಡಿಕೊಳ್ಳುವುದಿಲ್ಲ. ದೇಹದ ಪ್ರತಿಯೊಂದು ಭಾಗವೂ ತನ್ನದೇ ಆದ ಆನ್ ಮತ್ತು ಆಫ್ ಬಟನ್ನೊಂದಿಗೆ ಕೆಲಸ ಮಾಡುತ್ತದೆ. ಇದೀಗ ನನ್ನ ಎಡ ಭುಜ ಮತ್ತು ಬಲ ಮೊಣಕಾಲು ಸುಮ್ಮನೆ ಆಫ್ ಆಗಿವೆ. ಚರ್ಚೆ ಕಮೆಂಟ್ನಲ್ಲಿ ಮುಂದುವರೆಯಲಿ’ ಎಂದು ಬರೆದುಕೊಂಡಿದ್ದಾರೆ.

ಮೊಣಕಾಲಿನ ನೋವಿದ್ದ ಕಾರಣಕ್ಕಾಗಿ ಊರುಗೋಲನ್ನು ಬಳಸಿದ್ದಾರೆ ಎಂದು ವರದಿಯಾಗಿದೆ. ಹೃತಿಕ್ ರೋಷನ್ ಅವರ ಇತ್ತೀಚಿನ ಸಿನಿಮಾ ‘ವಾರ್ 2’ 2025ರಲ್ಲಿ ಬಿಡುಗಡೆಯಾಯಿತು. ಈ ಚಿತ್ರವನ್ನು ಅಯನ್ ಮುಖರ್ಜಿ ನಿರ್ದೇಶಿಸಿದ್ದರು. ಜೂನಿಯರ್ ಎನ್ಟಿಆರ್ ಕೂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.