ಹೃತಿಕ್ –ಟೈಗರ್ ‘ವಾರ್’ ಸಾಟಿಯಾಗದ ಸೆಟ್

ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ಅಭಿನಯದ ‘ವಾರ್’ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡು ಲಕ್ಷಾಂತರ ಜನರ ಮನಸ್ಸು ಗೆದ್ದಿದೆ.
‘ಯಶ್ ರಾಜ್ ಫಿಲ್ಮ್ಸ್’ ಈ ಸಿನಿಮಾ ನಿರ್ಮಾಣ ಮಾಡಿದೆ. ಹೃತಿಕ್ ಹಾಗೂ ಟೈಗರ್ ಜೋಡಿ ಮೊದಲ ಬಾರಿ ತೆರೆಯ ಮೇಲೆ ಮೋಡಿ ಮಾಡಿದೆ. ಯುದ್ಧಭೂಮಿಯ ದೃಶ್ಯಗಳು ಮೈನವಿರೇಳಿಸುವಂತಿವೆ ಎಂದು ಅಭಿಮಾನಿಗಳು ಟ್ವಿಟರ್‌ನಲ್ಲಿ ಹೊಗಳಿದ್ದಾರೆ.
ಈ ಚಿತ್ರದ ಟ್ರೇಲರ್ ಬಿಡುಗಡೆಗಾಗಿ ಸಿನಿಮಾ ತಂಡ ಅದ್ದೂರಿ ಸೆಟ್ ಹಾಕುವ ಬಗ್ಗೆ ಯೋಚಿಸಿತ್ತು. ಆದರೆ ಸಿನಿಮಾದ ಅದ್ದೂರಿತನಕ್ಕೆ ಯಾವುದೇ ಸೆಟ್ ಹಾಕಿದರೂ ಕಡಿಮೆಯೇ ಅನ್ನಿಸಿದ್ದರಿಂದ ಈ ಯೋಜನೆ ಕೈಬಿಡಲಾಯಿತು ಎಂದು ತಂಡ ಹೇಳಿಕೊಂಡಿದೆ.
ಹಿಂದೆಂದೂ ಮಾಡಲಾಗದ ಪ್ರಯತ್ನವೊಂದನ್ನು ಮಾಡುವ ಉದ್ದೇಶ ತಂಡಕ್ಕಿತ್ತು. ಅತ್ಯಂತ ದೊಡ್ಡದಾದ ಸೆಟ್ ಹಾಕಿ ಆ್ಯಕ್ಷನ್ ದೃಶ್ಯಗಳ ವೈಭವವನ್ನು ಸೃಷ್ಟಿಸಲು 4 ತಿಂಗಳು ಸತತವಾಗಿ ಪ್ರಯತ್ನವನ್ನೂ ಮಾಡಲಾಗಿತ್ತು. ಆದರೆ ಕೊನೆಗಳಿಗೆಯಲ್ಲಿ ಇದನ್ನು ಕೈಬಿಡಲಾಗಿದೆ.
ಟೈಗರ್ ಹಾಗೂ ಹೃತಿಕ್ ಇಬ್ಬರೂ ಹೊಡೆದಾಡುವ ದೃಶ್ಯಗಳು ಅಭಿಮಾನಿಗಳಿಗೆ ಹೆಚ್ಚು ಹಿಡಿಸಿದೆಯಂತೆ.
ಏಳು ದೇಶಗಳ 15 ಅತ್ಯಂತ ಪ್ರಮುಖ ಸ್ಥಳಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ನಾಲ್ವರು ಆ್ಯಕ್ಷನ್ ನಿರ್ದೇಶಕರು ದೃಶ್ಯಗಳನ್ನು ಸಂಯೋಜಿಸಿದ್ದಾರೆ.
ಸಿದ್ದಾರ್ಥ್ ಆನಂದ್ ನಿರ್ದೇಶನದ ‘ವಾರ್’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.