ಮೈಸೂರು: ಎರಡು ಪರದೆಗಳಲ್ಲಿ 112 ಚಿತ್ರಗಳ ಪ್ರದರ್ಶನ. ನಟರಾದ ಪುನೀತ್ ರಾಜ್ಕುಮಾರ್ ಹಾಗೂ ಸಂಚಾರಿ ವಿಜಯ್ ಅವರಿಗೆ ವಿಶೇಷ ಗೌರವ. ನಟ–ನಟಿಯರ ಆಕರ್ಷಣೆ. ಭಾರತೀಯ ಸಿನಿಮಾಗಳೊಂದಿಗೆ ವಿಶ್ವದ ಚಿತ್ರಗಳನ್ನು ನೋಡುವ ಅವಕಾಶ.

– ದಸರಾ ಅಂಗವಾಗಿ ನಡೆಯಲಿರುವ ಚಲನಚಿತ್ರೋತ್ಸವದ ವಿಶೇಷಗಳಿವು.

‘ದಸರಾ ಮಹೋತ್ಸವವನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸುತ್ತಿದ್ದು, ಸಮಿತಿಯಿಂದ ಚಲನಚಿತ್ರೋತ್ಸವ ಮತ್ತು ಕಾರ್ಯಾಗಾರ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ.26ರಂದು ಬೆಳಿಗ್ಗೆ 11ಕ್ಕೆ ಕಲಾಮಂದಿರದಲ್ಲಿ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಟ ಶಿವರಾಜ್ಕುಮಾರ್ ನೆರವೇರಿಸಲಿದ್ದಾರೆ. ಅಮೃತಾ ಅಯ್ಯಂಗಾರ್, ಕಾವ್ಯಾ ಶೆಟ್ಟಿ, ಸುಧಾರಾಣಿ, ಅನು ಪ್ರಭಾಕರ್ ಭಾಗವಹಿಸಲಿದ್ದಾರೆ’ ಎಂದು ಚಲನಚಿತ್ರೋತ್ಸವ ಸಮಿತಿಯ ವಿಶೇಷಾಧಿಕಾರಿ ಆರ್.ಶೇಷ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.

ಶಕ್ತಿಧಾಮದ ಮಕ್ಕಳೊಂದಿಗೆ ಅಶ್ವಿನಿ:

‘ಸೆ.27ರಿಂದ ಅ.3ರವರೆಗೆ ಒಟ್ಟು 112 ಚಿತ್ರಗಳು ಪ್ರದರ್ಶನಗೊಳ್ಳಲಿವೆ. 56 ಕನ್ನಡ, 28 ಪನೋರಮಾ, 28 ಅಂತರರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾಗಳು ಐನಾಕ್ಸ್ನ 3 ಮತ್ತು ಡಿಆರ್ಸಿಯ ಒಂದು ಪರದೆಯಲ್ಲಿ ಪ್ರದರ್ಶನಗೊಳ್ಳಲಿವೆ. ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ‘ಶಕ್ತಿಧಾಮದ’ ಮಕ್ಕಳೊಂದಿಗೆ ಸೆ.27ರಂದು ಪುನೀತ್ ಬಾಲ ನಟನಾಗಿ ಅಭಿನಯಿಸಿರುವ ‘ಬೆಟ್ಟದ ಹೂವು’ ಚಿತ್ರವನ್ನು ವೀಕ್ಷಿಸಲಿದ್ದಾರೆ’ ಎಂದರು.

‘ಸೆ.22ರಿಂದ 24ರವರೆಗೆ ಸಿನಿಮಾ ಕಾರ್ಯಾಗಾರ ನಡೆಸಲಾಗುತ್ತಿದೆ. ಚಲನಚಿತ್ರ ನಿರ್ಮಾಣದ ಪೂರ್ವ ತಯಾರಿ ಕುರಿತು ಸಿನಿಮಾ ಪ್ರಿಯರಿಗೆ ಮಾಹಿತಿ ನೀಡಲಾಗುತ್ತದೆ. 22ರಂದು ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಲಿದ್ದಾರೆ. ಚಂಪಾ ಶೆಟ್ಟಿ, ಪ್ರಶಾಂತ್ ಪಂಡಿತ್, ಪ್ರವೀಣ್ ಕೃಪಾಕರ್, ಪವನ್ ಕುಮಾರ್, ಶಂಕರ್ ಎನ್.ಸಂಡೂರು, ಪನ್ನಗಾಭರಣ, ಮಂಸೊರೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ. ₹ 300 ಪ್ರವೇಶ ಶುಲ್ಕ ಪಾವತಿಸಿ ಭಾಗವಹಿಸಬಹುದು’ ಎಂದು ಹೇಳಿದರು.

₹ 25 ಲಕ್ಷ ಕೇಳಿದ್ದೇವೆ:

‘ಉತ್ಸವಕ್ಕೆ ಸರ್ಕಾರದಿಂದ ₹ 25 ಲಕ್ಷ ಅನುದಾನ ಕೋರಲಾಗಿದೆ. ₹ 100ರ ಟಿಕೆಟ್ ಪಡೆದವರು ದಿನದಲ್ಲಿ ಪ್ರದರ್ಶನಗೊಳ್ಳುವ ಎಲ್ಲ ಸಿನಿಮಾಗಳನ್ನೂ ವೀಕ್ಷಿಸಬಹುದು. ವಾರದ ಟಿಕೆಟ್ಗೆ ವಿದ್ಯಾರ್ಥಿಗಳಿಗೆ ₹ 300 ಹಾಗೂ ಇತರರಿಗೆ ₹ 500 ನಿಗದಿಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ವಿವಿಧ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರಶಸ್ತಿ ಪಡೆದ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರಗಳಿಗಾಗಿವೆ’ ಎಂದು ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ತಿಳಿಸಿದರು.

ಪುನೀತ್ ರಾಜ್ಕುಮಾರ್ ಸಿನಿಮಾಗಳು

* ಬೆಟ್ಟದ ಹೂವು

* ಅಂಜನಿಪುತ್ರ

* ರಾಜಕುಮಾರ

* ಮೈತ್ರಿ

* ಪೃಥ್ವಿ

* ಯುವರತ್ನ

ಸಂಚಾರಿ ವಿಜಯ್ ಚಿತ್ರಗಳು

* ತಲೆದಂಡ

* ಪುಕ್ಸಟ್ಟೆ ಲೈಫು

* ಆಕ್ಟ್ 1978

ಕನ್ನಡ ಚಿತ್ರಗಳು: 100, ಶ್ರೀಸುತ್ತೂರು ಮಠ-ಗುರುಪರಂಪರೆ, 777 ಚಾರ್ಲಿ, ಆದ್ಯಾ, ಅವನೇ ಶ್ರೀಮನ್ನನಾರಾಯಣ, ಅವತಾರ ಪುರುಷ, ಬಡವರಾಸ್ಕಲ್, ಭಜರಂಗಿ-2, ಭರಾಟೆ, ದಿಯಾ, ದೃಶ್ಯ-2, ಗಾಳಿಪಟ, ಗರುಡಗಮನ ವೃಷಭ ವಾಹನ, ಜಂಟಲ್ ಮನ್, ಗಿಫ್ಟ್ ಬಾಕ್ಸ್, ಹರಕಥೆ ಅಲ್ಲ ಗಿರಿಕಥೆ, ಹೀರೋ, ಇಂಡಿಯಾ ವರ್ಸಸ್ ಇಂಗ್ಲೆಂಡ್, ಇನ್ಸಪೆಕ್ಟರ್ ವಿಕ್ರಂ, ಕವಚ, ಕವಲುದಾರಿ, ಕೆಜಿಎಫ್–1, ಕೆಜಿಎಫ್–2, ಲವ್ ಮಾಕ್ಟೇಲ್–1, ಲವ್ ಮಾಕ್ಟೇಲ್-2, ಮದಗಜ, ಮುಗಿಲ್ ಪೇಟೆ, ನಿನ್ನ ಸನಿಹಕೆ, ಒಂಭತ್ತನೇ ದಿಕ್ಕು, ಫೈಲ್ವಾನ್, ರೈಡರ್, ರಾಬರ್ಟ್, ಸಖತ್, ಸಲಗ, ಸೀತಾರಾಮ ಕಲ್ಯಾಣ, ಶಿವಾಜಿ ಸುರತ್ಕಲ್, ವಿಕ್ರಾಂತ್ ರೋಣ, ವಿಂಡೋಸೀಟ್.

ಭಾರತೀಯ ಚಿತ್ರಗಳು: ಎ ಡಾಗ್ ಅಂಡ್ ಹಿಸ್ ಮ್ಯಾನ್, ಹರಿವ ನದಿಗೆ ಮೈಯೆಲ್ಲಾ ಕಾಲು, ಅಡಿಯು ಗೊಡಾರ್ಡ್, ಅಗ್ನಿವರ್ಷ, ಐಸೇ ಹಿ, ಬಾಫ್, ಬೂಂಬಾ ರೈಡ್, ಈ ಮಣ್ಣು, ಘೋಡೇ ಕೋ ಜಲೇಬಿ ಖಿಲಾನೆ ಲೇಜಾರಿಯಾ ಹೂಂ, ಹಾರುವ ಹಂಸಗಳು, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಇಂಟು ದಿ ಮಿಸ್ಟ್, ದಿ ಕ್ಲೌಡ್ ಅಂಡ್ ದಿ ಮ್ಯಾನ್, ಮನುಸಂಗಡ, ಮಿಂಚುಹುಳು, ಮೂಕಜ್ಜಿಯ ಕನಸುಗಳು, ನೀಲಿಹಕ್ಕಿ, ನೋಯ್, ಪದಕ, ಸಾರಾ ವಜ್ರ, ಉರಿಯಟ್ಟು, ವಿಡೋ ಆಫ್ ಸೈಲೆನ್ಸ್.

ವಿಶ್ವಚಿತ್ರಗಳು: ಎ ಜೆಂಟಲ್ ಕ್ರೀಚರ್, ಎ ಹೀರೋ, ಅಡಲ್ಟ್ಸ್ ಇನ್ ದಿ ರೂಮ್, ಅನದರ್ ರೌಂಡ್, ಆ್ಯಶ್ ಇಸ್ ದಿ ಪ್ಯೂರೆಸ್ಟ್ ವೈಟ್, ಕ್ಯಾಪರ್ನಾಮ್, ಎವರಿಥಿಂಗ್ ಎವೆರಿವೇರ್ ಅಳ್ ಎಟ್ ಒನ್ಸ್, ಎಕೈಲ್, ಐ ಡೇನಿಯಲ್ ಬ್ಲೇಕ್, ಲವ್ ಲೆಸ್, ನಾರ್ಥ್ ಸಿ, ಪ್ಯಾರಲೆಲ್ ಮದರ್ಸ್, ಪ್ಯಾರಾ ಸೈಟ್, ಪೋಟ್ರೇಟ್ ಆಫ್ ಎ ಲೇಡಿ ಆನ್ ಫೈರ್, ಸಾರಿ ವಿ ಮಿಸ್ಡ್ ಯೂ, ಸ್ಪೆನ್ಸರ್, ಬೈಸಿಕಲ್ ಥೀವ್ಸ್, ದಿ ಲಾಸ್ಟ್ ಎಕ್ಸೆ ಕ್ಯೂಷನ್, ದಿ ಸೆವೆಂತ್ ಸೀಲ್, ದಿ ಟ್ಯೂರಿನ್ ಹಾರ್ಸ್, ಥ್ರೋನ್ ಆಫ್ ಬ್ಲಡ್, ಆನ್ ಡೈನ್, ವ್ಯಾಗಾ ಬಾಂಡ್, ವಾಕಬೌಟ್, ವೆನ್ ಹಿಟ್ಲರ್ ಸ್ಟೋಲ್ ಪಿಂಕ್ ರ್ಯಾಬಿಟ್, ವೈಫ್ ಆಫ್ ಎ ಸ್ಪೈ, ವಿಮೆನ್ ಇನ್ ದಿ ಡ್ಯೂನ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.