ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಟ್’ ಎಂದೇ ಹೆಸರಾದ ಆಮೀರ್ ಖಾನ್ ಈ ಬಾರಿ ಸ್ವಮೇಕ್ ಬಿಟ್ಟು, ರಿಮೇಕ್ ಚಿತ್ರಕ್ಕೆ ಕೈಹಾಕಿದ್ದಾರೆ. ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದಲ್ಲಿ ಅವರು ಸಿಖ್ ಯುವಕ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ ಆಮೀರ್‌ಖಾನ್ ಸುಮಾರು ಇಪ್ಪತ್ತು ಕೆ.ಜಿವರೆಗೂ ದೇಹದ ತೂಕ ಇಳಿಸಿ, ಚಿರಯುವಕನಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಸಿಖ್ಖರಂತೆ ಪೇಟ (ಪಗಡಿ) ಧರಿಸಿ, ಹುರಿ ಮೀಸೆಯ ಮತ್ತು ನೀಳ ಗಡ್ಡಧಾರಿಯಾಗಿರುವ ಆಮೀರ್ ಖಾನ್ ಹೊಸ ಲುಕ್‌ನ ಫೋಟೊ ಈಗ ಜಾಲತಾಣಗಳಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

ಆಮೀರ್ ಖಾನ್ ಅವರ ಟ್ವಿಟರ್ ಖಾತೆಯ ಡಿಪಿಯು ಬದಲಾಗಿದ್ದು, ಡಿಪಿಗೆ ಲಾಲ್ ಸಿಂಗ್ ಛಡ್ಡಾ ಪಾತ್ರದ ಫೋಟೊವನ್ನೇ ಆಮೀರ್ ಹಾಕಿಕೊಂಡಿದ್ದಾರೆ.‘ಸತ್ ಶ್ರೀ ಅಕಾಲ್ ಜಿ ನಾನು ಲಾಲ್... ಲಾಲ್ ಸಿಂಗ್ ಛಡ್ಡಾ’ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಕೆಲವೇ ಗಂಟೆಯಲ್ಲಿ ಸುಮಾರು 10 ಸಾವಿರ ಮಂದಿ ರಿಟ್ವೀಟ್ ಮಾಡಿದ್ದು, ಸುಮಾರು ಒಂದೂವರೆ ಲಕ್ಷ ಜನರು ಲೈಕ್ ಮಾಡಿದ್ದಾರೆ.

1994ರಲ್ಲಿ ತೆರೆಕಂಡು,ಆಸ್ಕರ್ ಪ್ರಶಸ್ತಿ ಪಡೆದ ಹಾಲಿವುಡ್‌ನ ಜನಪ್ರಿಯ ಚಿತ್ರ ‘ಫಾರೆಸ್ಟ್ ಗಂಪ್’ನಿಂದ ಸ್ಫೂರ್ತಿ ಪಡೆದು‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ‘ಸಿಕ್ರೇಟ್ ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕ ಅದ್ವೈತ್ ಚಂದನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕರೀನಾ ಕಪೂರ್ ನಟಿಸುತ್ತಿದ್ದಾರೆ. ಆಮಿರ್ ಖಾನ್ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಫಾರೆಸ್ಟ್ ಗಂಪ್’ ಚಿತ್ರವನ್ನುಹಾಲಿವುಡ್‌ನ ಹೆಸರಾಂತ ನಿರ್ದೇಶಕಟಾಮ್ಸ್ ಹಂಕ್ಸ್ ನಿರ್ದೇಶಿಸಿದ್ದರು. ಈ ಚಿತ್ರದ ಚಿತ್ರಕಥೆಯನ್ನುಎರಿಕ್ ರಾತ್ ಹೆಣೆದಿದ್ದರು. ಇದನ್ನು ‘ಲಾಲ್ ಸಿಂಗ್ ಛಡ್ಡಾ’ದಲ್ಲಿಭಾರತೀಯ ಸೊಗಡಿಗೆ ಒಗ್ಗುವಂತೆ ಚಿತ್ರಕಥೆ ಹೆಣೆದಿರುವುದು ಅತುಲ್ ಕುಲಕರ್ಣಿ. ಪ್ರೀತಮ್ ಸಂಗೀತ ನಿರ್ದೇಶನ ಮಾಡಿದ್ದು,ಅಮಿತಾಭ್ ಭಟ್ಟಾಚಾರ್ಯಸಾಹಿತ್ಯ ರಚಿಸಿದ್ದಾರೆ.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಅವರ ಸೂಚನೆ ಮೇರೆಗೆಅಮೃತಸರದ ಸ್ವರ್ಣಮಂದಿರದಲ್ಲಿ ನಡೆದ ‘ಆಪರೇಷನ್ ಬ್ಲೂ ಸ್ಟಾರ್’, ಪಿ.ವಿ. ನರಸಿಂಹರಾವ್ ಪ್ರಧಾನಿಯಾಗಿದ್ದಾಗ ನಡೆದಬಾಬ್ರಿ ಮಸೀದಿ ಧ್ವಂಸ ಘಟನೆ ಸೇರಿ ದೇಶದಲ್ಲಿ ನಡೆದ ಪ್ರಮುಖ ಘಟನಾವಗಳಿಗೆ ಸಂಬಂಧಿಸಿದ ಅಂಶಗಳು ಈ ಚಿತ್ರದಲ್ಲಿ ಇರಲಿವೆ ಎನ್ನುವ ಮಾತು ಕೇಳಿಬರುತ್ತಿವೆ.

ಆಮೀರ್ ಅವರ ‘ಪಿಕೆ’ ಸಿನಿಮಾದಂತೆ ಈ ಚಿತ್ರ ಕೂಡ ವಿವಾದಕ್ಕೆ ಕಾರಣವಾಗಬಹುದು ಎನ್ನುವ ವಿಶ್ಲೇಷಣೆಗಳು ಚಿತ್ರರಂಗದಲ್ಲಿ ಚಾಲ್ತಿಯಲ್ಲಿವೆ. ‘ಥಗ್ಸ್ ಆಫ್ ಹಿಂದೂಸ್ಥಾನ್’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿಹೀನಾಯ ಸೋಲು ಕಂಡ ಮೇಲೆ, ಮತ್ತೆ ಗೆಲುವಿನ ನಗೆ ಬೀರಲು, ಯಶಸ್ಸಿನ ಹಾದಿಗೆ ಮರಳಲು ಆಮೀರ್ ‘ಲಾಲ್ ಸಿಂಗ್ ಛಡ್ಡಾ’ನಾಗಿ ಕಾಣಿಸಿಕೊಳ್ಳಲು ಆಮೀರ್ ಸಜ್ಜಾಗಿದ್ದಾರೆ. ಈ ಸಿನಿಮಾ ಮೇಲೆ ಅವರು ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿರುವಂತೆಯೂ ಕಾಣಿಸುತ್ತಿದೆ.

ತಮ್ಮದೇ ನಿರ್ಮಾಣ ಸಂಸ್ಥೆ ‘ವಯಾಕಾಮ್ 18 ಸ್ಟುಡಿಯೋಸ್’ಯಡಿ ಆಮೀರ್ ಖಾನ್ ಮತ್ತು ಕಿರಣ್ ರಾವ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಪಂಜಾಬ್‌ನ ವಿವಿಧ ಭಾಗಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಂಢೀಗಢ, ರೂಪ್ ನಗರದಲ್ಲಿ ಹಾಗೂಸಟ್ಲೇಜ್ ನದೀ ಪಾತ್ರದಲ್ಲೂಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಬಾಲಿವುಡ್‌ನಲ್ಲಿ ಈಗಾಗಲೇಬಹುನಿರೀಕ್ಷೆ ಹುಟ್ಟು ಹಾಕಿರುವಈ ಚಿತ್ರವು 2020ರ ಕ್ರಿಸ್ಮಸ್ ವೇಳೆಗೆ ತೆರೆ ಕಾಣುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.