ಭಾನುವಾರ, ಮಾರ್ಚ್ 26, 2023
25 °C

ಟಾಲಿವುಡ್‌ ಹೊಗಳಿದ ಮೋದಿ: ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಹೇಳಿದ್ದು ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಟ್ವೀಟ್‌ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟಾಲಿವುಡ್‌ ಬಗ್ಗೆ ಮಾತನಾಡಿದ್ದಾರೆ. 

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆಲುಗಿನ ಬಾಹುಬಲಿ ಮತ್ತು ಪುಷ್ಪ ಸಿನಿಮಾಗಳ ಬಗ್ಗೆ ಹೊಗಳಿಕೆಯ ಮಾತುಗಳನ್ನು ಹೇಳಿದ್ದರು. ಇದಕ್ಕೆ ಟ್ವೀಟ್‌ ಮಾಡಿರುವ ಅವರು ‘ ಪ್ರಧಾನಿ ಮೋದಿ ಹೊಗಳಿದ ವಿಚಾರಕ್ಕೆ ಸಂತಸ ಪಡುವ ಅಗತ್ಯವಿಲ್ಲ. ಅವರು ‘ಬಾಹುಬಲಿ’ ಹಾಗೂ ‘ಪುಷ್ಪ’ ಚಿತ್ರಗಳ ಬಗ್ಗೆ ಮಾತ್ರ ಮಾತನಾಡಿದ್ದಾರೆ. ನಾವು ಪ್ರತಿ ವರ್ಷ ಮಾಡುವ ಇತರ 150 ಚಿತ್ರಗಳ ಬಗ್ಗೆ ಅವರು ಮಾತನಾಡಿಲ್ಲ. ರಾಜಮೌಳಿ ಹಾಗೂ ಅಲ್ಲು ಅರ್ಜುನ್ ಕನ್ನಡಿಗರಾಗಿದ್ದರೆ ಮೋದಿ ಚಂದನವನವನ್ನು ಹೊಗಳುತ್ತಿದ್ದರು’ ಎಂದಿದ್ದಾರೆ.

ಓದಿ... ಹೊಸ ಫೋಟೊ ಹಂಚಿಕೊಂಡ ಕಾಜಲ್‌ ಅಗರ್‌ವಾಲ್‌: ಅಭಿಮಾನಿಗಳಿಂದ ಭಾರಿ ಮೆಚ್ಚುಗೆ

ತೆಲುಗಿನಲ್ಲಿ ವರ್ಷಕ್ಕೆ 150 ಸಿನಿಮಾಗಳು ನಿರ್ಮಾಣವಾಗುತ್ತಿದ್ದರೂ ಕೇವಲ ಒಂದಿಬ್ಬರಿಂದ ಮಾತ್ರ ತೆಲುಗು ಸಿನಿಮಾರಂಗಕ್ಕೆ ಯಶಸ್ಸು ಸಿಕ್ಕಿದೆ ಎಂದು ಬಿಂಬಿಸುವುದರ ಬಗ್ಗೆ ಮಾತನಾಡಿದ್ದಾರೆ. 

ಓದಿ... ಪ್ರೇಮಿಗಳ ದಿನ: ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರದ ಹಾಡು ಬಿಡುಗಡೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು