ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕತ್ರಿನಾ ಕೈಫ್ ಅಣ್ಣನ ಜೊತೆ ಲವ್‌ನಲ್ಲಿ ಬಿದ್ರಾ ಬಳಕುವ ಬಳ್ಳಿ ಇಲಿಯಾನ?

ಅಕ್ಷರ ಗಾತ್ರ

ಬೆಂಗಳೂರು: ಬಳಕುವ ಬಳ್ಳಿಯಂತಹ ಚೆಲುವೆ ಎಂಬ ಬಿರುದು ಹೊಂದಿರುವ ನಟಿ ಇಲಿಯಾನ ಡಿಕ್ರೂಸ್ ಅವರಬಗ್ಗೆ ಸುದ್ದಿಯೊಂದು ಹೊರಬಿದ್ದಿದ್ದು ಅವರ ಅಭಿಮಾನಿಗಳು ಓಹ್! ಎಂಬ ಉದ್ಘಾರ ತೆಗೆದಿದ್ದಾರೆ.

ಹೌದು, ಕಳೆದ ಎರಡ್ಮೂರು ವರ್ಷಗಳಿಂದಚಿತ್ರರಂಗದಲ್ಲಿ ಅಷ್ಟೊಂದು ಬ್ಯುಸಿ ಇರದ ಇಲಿಯಾನಈಗ ತಮ್ಮ ಹೊಸ ಬಾಳ ಪಯಣ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಇಲಿಯಾನಾ ಖ್ಯಾತ ನಟಿ ಕತ್ರಿನಾ ಕೈಪ್ ಅವರ ಅಣ್ಣ ಸೆಬಾಸ್ಟಿಯನ್ (Sebastien Laurent Michel) ಜೊತೆ ಡೇಟಿಂಗ್‌ನಲ್ಲಿದ್ದಾರೆ ಎಂಬ ವದಂತಿ ಹಬ್ಬಿದೆ.

ಇದಕ್ಕೆ ಕಾರಣ ಸ್ವತಃ ಇಲಿಯಾನ ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಸೆಬಾಸ್ಟಿಯನ್ ಜೊತೆ ಇರುವ ಫೋಟೊ ಶೇರ್ ಮಾಡಿಕೊಂಡಿದ್ದು. ನಿನ್ನೆಯಷ್ಟೆ ಕತ್ರಿನಾ ಅವರ ಜನ್ಮದಿನವನ್ನು ಗೋವಾದಲ್ಲಿ ಇಲಿಯಾನ, ವಿಕ್ಕಿ ಕೌಶಲ್ ಇತರರು ಜೊತೆಗೂಡಿ ಆಚರಿಸಿದ್ದಾರೆ. ಈ ವೇಳೆ ಇಲಿಯಾನ ಹಾಗೂ ಸೆಬಾಸ್ಟಿಯನ್ ಅವರು ಬಹಳ ಆತ್ಮೀಯವಾಗಿ ಕಂಡು ಬಂದಿದ್ದರು ಎಂದು ವರದಿಗಳು ಹೇಳಿವೆ.

ಸೆಬಾಸ್ಟಿಯನ್
ಸೆಬಾಸ್ಟಿಯನ್

ಈ ಇಬ್ಬರೂ ಕಳೆದ ಕೆಲ ದಿನಗಳಿಂದ ಲವ್‌ನಲ್ಲಿ ಬಿದ್ದಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.

ಇನ್ನು ಕಳೆದ ವರ್ಷ ಅಭಿಷೇಕ್ಬಚ್ಚನ್ ಅವರ ದಿ ಬಿಗ್ ಬುಲ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಇಲಿಯಾನ ಅವರ ಕೈಯಲ್ಲಿ ಸದ್ಯಕ್ಕೆ ಎರಡು ಚಿತ್ರಗಳು ಮಾತ್ರ ಇವೆ.

ಸಹಜ ಸೌಂದರ್ಯ ಮತ್ತು ತುಂಟ ಮುಗುಳ್ನಗೆಯಿಂದಲೇ ಮನಗೆದ್ದ ಬಾಲಿವುಡ್ ಬೆಡಗಿಕತ್ರಿನಾ ಕೈಫ್ಶನಿವಾರ 39ನೇ ವರ್ಷಕ್ಕೆ ಕಾಲಿಟ್ಟಿಟ್ಟರು.ನೆಚ್ಚಿನ ನಟಿಯ ಹುಟ್ಟುಹಬ್ಬದ ಪ್ರಯುಕ್ತ ಚಿತ್ರರಂಗದ ನಟ –ನಟಿಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT