ಗುರುವಾರ , ಜನವರಿ 28, 2021
22 °C

ಅನುಮತಿ ‍ಪಡೆಯದೇ ಹೋಟೆಲ್ ನಿರ್ಮಾಣ: ನಟ ಸೋನು ಸೂದ್ ವಿರುದ್ಧ ದೂರು ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಸೋನು ಸೂದ್ ವಿರುದ್ಧ ಮುಂಬೈ ಮಹಾನಗರ ಪಾಲಿಕೆ ಪೊಲೀಸರಿಗೆ ಲಿಖಿತ ದೂರೊಂದನ್ನು ಸಲ್ಲಿಸಿದೆ. ಅಲ್ಲದೇ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಎಂದು ಹೇಳಿದೆ. ಆ ದೂರಿನಲ್ಲಿ ಸೋನು ಸೂದ್ ಪಾಲಿಕೆಯ ಅನುಮತಿ ಪಡೆಯದೇ ವಸತಿ ಕಟ್ಟಡವನ್ನು ಹೋಟೆಲ್‌ ಆಗಿ ಪರಿವರ್ತಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಪಾಲಿಕೆ ಹಲವು ಬಾರಿ ಈ ವಿಷಯಕ್ಕೆ ಸಂಬಂಧಿಸಿ ಸೋನು ಅವರಿಗೆ ನೋಟಿಸ್‌ ನೀಡಿತ್ತು. ಆದರೆ ಸೋನು ಯಾವುದಕ್ಕೂ ಪ್ರಕ್ರಿಯೆ ನೀಡಿರಲಿಲ್ಲ. ಆ ಕಾರಣಕ್ಕೆ ಪಾಲಿಕೆ ಈಗ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ. ಕಟ್ಟಡವನ್ನು ಆಕ್ರಮವಾಗಿ ಬಳಸಿಕೊಂಡಿದ್ದಾರೆ ಎಂಬ ಕಾರಣದಿಂದ ಸೋನು ಹಾಗೂ ಪತ್ನಿ ಸೋನಾಲಿ ಸೂದ್ ಮೇಲೆ ದೂರು ದಾಖಲಿಸಲಾಗಿದೆ.

ಆಗಿದ್ದೇನು?
ಸೋನು ಮುಂಬೈನ ಜುಹು ಪಾಂತ್ರ್ಯದ ಶಕ್ತಿ ಸಾಗರ್‌ನಲ್ಲಿ ನೆಲೆಸಿದ್ದಾರೆ. ಅದು 6 ಮಹಡಿಗಳ ಕಟ್ಟಡ. ಅದು ವಸತಿ ಕಟ್ಟಡವಾಗಿದ್ದು ಸೋನು ಅದನ್ನು ಹೋಟೆಲ್ ಆಗಿ ಪರಿವರ್ತಿಸಿದ್ದಾರೆ. ಆದರೆ ಅದನ್ನು ಅನುಮತಿ ಪಡೆಯದೇ ಮಾಡಿದ್ದಾರೆ ಎಂಬುದು ಪಾಲಿಕೆಯ ದೂರು. ಈ ಹಿಂದೆ ಪಾಲಿಕೆ 2 ಬಾರಿ ಸ್ಥಳ ಪರಿಶೀಲನೆ ಮಾಡಿ ಎಚ್ಚರಿಕೆ ನೀಡಿತ್ತು. ಆದರೂ ಸೋನು ಯಾವುದೇ ಬದಲಾವಣೆ ಮಾಡಿರಲಿಲ್ಲ. ಆ ಕಾರಣಕ್ಕೆ ಜುಹು ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದೆ ಪಾಲಿಕೆ. ಅಲ್ಲದೇ ತಕ್ಷಣಕ್ಕೆ ಈ ವಿಷಯಕ್ಕೆ ಸಂಬಂಧಿಸಿ ಸೋನು ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಕೇಳಿಕೊಂಡಿದೆ. ಮುಂಬೈ ಮಹಾನಗರ ಪಾಲಿಕೆಯ ಪಶ್ಚಿಮ ವಾರ್ಡ್‌ನ ಕಟ್ಟಡ ಹಾಗೂ ಕಾರ್ಖಾನೆ ಇಲಾಖೆಯ ಕಿರಿಯ ಸಹಾಯಕ ಎಂಜಿನಿಯರ್‌ ಮಂದಾರ್‌ ವಾಕಂಕಟ್‌ ದೂರಿನ ಪ್ರತಿಗೆ ಸಹಿ ಮಾಡಿದ್ದಾರೆ.

ಈ ಕುರಿತು ಜುಹು ಪೊಲೀಸರು ತನಿಖೆ ಆರಂಭಿಸಿದ್ದು, ಸೋನು ವಿರುದ್ಧ ಎಫ್‌ಐಆರ್ ದಾಖಲಿಸಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು