ಬುಧವಾರ, ಜನವರಿ 22, 2020
28 °C

ಮರಾಠಿ ಚಿತ್ರದಲ್ಲಿ ಚಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ವಿಕೂನ್‌ ಟಾಕಾ’ ಚಿತ್ರದ ಮೂಲಕ ಚಂಕಿ ಪಾಂಡೆ ಮರಾಠಿ ಸಿನಿಮಾ ರಂಗಕ್ಕೆ ಪಾದರ್ಪಣೆ ಮಾಡಲಿದ್ದಾರೆ. ಚಂಕಿ ಪಾಂಡೆ ಬಾಲಿವುಡ್‌ ಕಂಡ ಅತ್ಯುತ್ತಮ ನಟ, ಹಾಸ್ಯಗಾರ.

90ರ ದಶಕದಲ್ಲಿ ಚಂಕಿ ಪಾಂಡೆ ಅಭಿಯಾನದ ಎಲ್ಲಾ ಚಿತ್ರಗಳು  ಸೂಪರ್‌ ಹಿಟ್‌ ಗಳಿಸುತ್ತಿದ್ದವು. ಅವರ ಅಭಿನಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿತ್ತು. ಚಂಕಿ ಪಾಂಡೆ ಅಭಿನಯದ ‘ತೇಜಾಬ್‌’, ವಿಶ್ವಾತ್ಮ ಮತ್ತು ‘ಆಂಖೆ’ ಚಿತ್ರಗಳು ತುಂಬಾ ಯಶಸ್ಸು ಕಂಡಿದ್ದವು. ಈ ಬಳಿಕ ಕಾಮಿಡಿ ಮೇಲಿದ್ದ ಅಭಿರುಚಿಯಿಂದಾಗಿ ಚಂಕಿ, ಹಾಸ್ಯಗಾರನಾಗುವ ನಿರ್ಧಾರವನ್ನು ಮಾಡಿದರು. 

ಹೌಸ್‌ಪುಲ್‌ ಸಿನಿಮಾಗಳಲ್ಲಿ ‘ಆಕ್ರಿ ಪಾಸ್ತಾ’ ಪಾತ್ರ ಚಂಕಿಗೆ ತುಂಬಾ ಹೆಸರು ತಂದುಕೊಟ್ಟಿತ್ತು. ಹೌಸ್‌ಫುಲ್‌–3 ಸಿನಿಮಾದಲ್ಲೂ ಅವರು ಅಭಿನಯಿಸಿದ್ದು,  ಈ ಚಿತ್ರದ ಬಳಿಕ ಈಗ ಅವರು ಮರಾಠಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅವರಿಗೆ ಮರಾಠಿ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಈ ಬಗ್ಗೆ ಸಂತೋಷ ಹಂಚಿದ ಚಂಕಿ, ಮರಾಠಿ ಭಾಷೆಯ ಸಾಮಾಜಿಕ–ಕಾಮಿಡಿ ಸಿನಿಮಾದಲ್ಲಿ ಅಭಿನಯ ಮಾಡುವುದು ನನ್ನ ಬಹುದಿನದ ಇಚ್ಛೆಯಾಗಿತ್ತು. ಮರಾಠಿ ಹಾಸ್ಯಕ್ಕೆ ಯಾವುದೇ ಸರಿಸಾಟಿಯಿಲ್ಲ. ಮರಾಠಿ ಭಾಷೆ ಅಂದ್ರೆ ನನಗೆ ತುಂಬಾ ಇಷ್ಟ. ಹಿಂದಿ ನನ್ನ ಮಾತೃ ಭಾಷೆ ಆದರೂ ನನಗೆ ಮರಾಠಿ ಮಾತನಾಡಲು ಚೆನ್ನಾಗಿಯೇ ಬರುತ್ತೆ ಎಂದು ಹೇಳಿದ್ದಾರೆ.

‘ವಿಕೂನ್‌ ಟಾಕಾ’ ಚಿತ್ರವನ್ನು ಸಮೀರ್‌ ಪಾಟೀಲ ನಿರ್ದೇಶಿಸುತ್ತಿದ್ದಾರೆ. ಹಳ್ಳಿ ಮತ್ತು ಬಡ ಜನರು ನೈಜ ಜೀವನದ ತೊಂದರೆಗಳ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ. ಇದರಲ್ಲಿ ಚಂಕಿ ಮುಖ್ಯ ಭೂಮಿಕೆಯಲ್ಲಿದ್ದಾರೆ.

***

ಮರಾಠಿ ಸಿನಿರಂಗ ದಿನೇ ದಿನೇ ಬೆಳೆಯುತ್ತಲೇ ಇದೆ. ಮೂವಿ ನಿರ್ಮಾಪಕರು, ನಿರ್ದೇಶಕರ ಮರಾಠಿ ಭಾಷೆಯ ಪ್ರೀತಿ, ಚಿತ್ರದಲ್ಲಿ ಎದ್ದು ಕಾಣುತ್ತೆ. ‘ವಿಕೂನ್‌ ಟಾಕಾ’ ಚಿತ್ರದ ಕಥೆ ನನಗೆ ಬಹಳ ಇಷ್ಟ ಆಗಿದೆ. ಸಿನಿಮಾದ ಮೇಲೆ ನನಗೆ ಬಹಳ ನಿರೀಕ್ಷೆಯಿದೆ.

-ಚಂಕಿ ಪಾಂಡೆ, ನಟ

ಪ್ರತಿಕ್ರಿಯಿಸಿ (+)