‘ಇಂಡಿಯನ್ 2’ ಸಿನಿಮಾ ಕೈಬಿಡಲಾಗಿದೆ ಎಂಬುದು ಸುಳ್ಳು ಸುದ್ದಿ.ಲಾಕ್‌ಡೌನ್ ಮುಗಿದ ನಂತರ ಎಲ್ಲಾ ಸಿನಿಮಾಗಳಂತೆ, ಈ ಸಿನಿಮಾದ ಚಿತ್ರೀಕರಣವೂ ಮುಂದುವರಿಯುತ್ತದೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಸ್ಪಷ್ಟನೆ ನೀಡಿದೆ.

ಬಹುಭಾಷಾ ನಟ ಕಮಲ ಹಾಸನ್ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ಇಂಡಿಯನ್ 2’ ಸೆಟ್ಟೇರಿದ ದಿನದಿಂದಲೂ ಆ ಸಿನಿಮಾ ಬಗ್ಗೆ ಒಂದಲ್ಲ ಒಂದು ನಕಾರಾತ್ಮಕ ಸುದ್ದಿಗಳೇ ಕೇಳಿಬರುತ್ತಿವೆ. ಫೆಬ್ರುವರಿ 19ರಂದು ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಸಂದರ್ಭದಲ್ಲಿ ಕ್ರೇನ್ ಅಪಘಾತ ಸಂಭವಿಸಿ ಮೂರು ಜನ ಸಾವನ್ನಪ್ಪಿದ್ದರು. ಇದೇ ಪ್ರಕರಣ ಕಮಲ ಹಾಸನ್ ಹಾಗೂ ಸಿನಿಮಾ ನಿರ್ಮಾಪಕರ ಮಧ್ಯೆ ಮನಸ್ತಾಪಕ್ಕೂ ಕಾರಣವಾಗಿತ್ತು.

ಇದಲ್ಲದೇ ಸಿನಿಮಾ ನಿರ್ಮಾಣ ವಿಚಾರದಲ್ಲಿ ಕೆಲವು ಮನಸ್ತಾಪ, ಲಾಕ್‌ಡೌನ್‌ನಿಂದಾಗಿ ಉಂಟಾದ ಭಾರಿ ನಷ್ಟದಿಂದ ಈ ಸಿನಿಮಾಕ್ಕೆ ಬಂಡವಾಳ ಹೂಡಿರುವ ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾ ಯೋಜನೆ ಕೈಬಿಟ್ಟಿದೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಡಿದ್ದವು. ಇದಲ್ಲದೇ ‘ಇಂಡಿಯನ್ 2’ ಸಿನಿಮಾ ನಿರ್ದೇಶಕ ಶಂಕರ್ ಸಹ ತಮ್ಮ ಮುಂದಿನ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ಈ ಸುದ್ದಿಗೆ ಮತ್ತಷ್ಟು ಇಂಬು ದೊರಕಿತ್ತು.

‘ಇಂಡಿಯನ್ 2’ ಸಿನಿಮಾವನ್ನು ಡ್ರಾಪ್ ಮಾಡಿಲ್ಲ. ಇದೆಲ್ಲಾ ಆಧಾರರಹಿತ ಸುದ್ದಿಗಳು. ಸಿನಿಮಾದ ಚಿತ್ರೀಕರಣ ಶೇಕಡ 60ರಷ್ಟು ಮುಗಿದಿದೆ. ಈ ಹಂತದಲ್ಲಿ ಸಿನಿಮಾವನ್ನು ಹೇಗೆ ಬೇಡ ಎನ್ನಲಾಗುತ್ತದೆ?. ಲಾಕ್‌ಡೌನ್ ನಂತರ ಚಿತ್ರೀಕರಣ ನಡೆಸುವ ಆಲೋಚನೆಯಲ್ಲಿದ್ದೇವೆ ಎಂದು ಲೈಕಾ ಪ್ರೊಡಕ್ಷನ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.