ಬೆಂಗಳೂರು: ಬಾಲಿವುಡ್ ನಟಿ ಸೋನಮ್ ಕಪೂರ್ ಅವರ ಮುಂಬೈ ಅಪಾರ್ಟ್‌ಮೆಂಟ್ ಮನೆಯ ಒಳಾಂಗಣ ವಿನ್ಯಾಸವನ್ನು ಬೆರುಗುಗೊಳಿಸುವಂತೆ ರೂಪಿಸಲಾಗಿದ್ದು ಈ ಬಗೆಗಿನ ವಿಡಿಯೊ ಗಮನ ಸೆಳೆದಿದೆ.
ಸೋನಮ್ ಕಪೂರ್ ಈ ಕುರಿತ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು ಮನೆಯ ಒಳಾಂಗಣವನ್ನು ತೆರೆದಿಟ್ಟಿದ್ದಾರೆ.
ಹಾಲ್, ಬೆಡ್ ರೂಂ, ಅಡುಗೆ ಮನೆ, ಸಿಟ್ ಔಟ್, ಕೋಣೆಗಳು ಬಾಲ್ಕನಿಯನ್ನು ಆಧುನಿಕತೆಯ ಸೊಬಗಿನೊಂದಿಗೆ ಹಾಗೂ ಸಾಂಪ್ರಾದಾಯಿಕ ಕರಕುಶಲಗಳೊಂದಿಗೆ ನಿರ್ಮಿಸಲಾಗಿದೆ. ಒಂದಕ್ಕಿಂತ ಒಂದು ಮಿಗಿಲಾಗಿ ಅಂದಗೊಳಿಸಲಾಗಿದೆ.
ನನ್ನ ವೃತ್ತಿ ಜೀವನದಲ್ಲಿ ಭಾರತದ ಹಲವೆಡೆ ಸುತ್ತಾಟದಲ್ಲಿ ಸಂಗ್ರಹಿಸಿದ ಹಲವಾರು ವಿಶೇಷ ಪರಿಕರಗಳಿಂದ ಮನೆ ಸಿಂಗರಿಸಲಾಗಿದೆ. ನನ್ನ ಕಲ್ಪನೆ ಇಲ್ಲಿ ಸಾಕಾರವಾಗಿದೆ. ಅದಕ್ಕೆ ಪತಿ ತುಂಬಾ ಸಹಕಾರ ಕೊಟ್ಟಿದ್ದಾರೆ ಎಂದು ಸಂತಸ ಹಂಚಿಕೊಂಡಿದ್ದಾರೆ.
ಗೋಡೆ ಮೇಲೆ ಚಿತ್ರಿಸಲಾಗಿರುವ ಕಲಾಕೃತಿಗಳು ಕೈಯಿಂದಲೇ ಮಾಡಿರುವುದು ಎಂದು ಅವರು ಹೇಳಿಕೊಂಡಿದ್ದಾರೆ.
ವಿಡಿಯೊ ನೋಡಿ