ಬೆಂಗಳೂರು: ‘ನಾನು ಸಾಧನೆ ಮಾಡಲು ಡಾ.ರಾಜ್‌ಕುಮಾರ್ ಕುಟುಂಬ ಕಾರಣ’ ಎಂದು ನಟಿ ರಮ್ಯಾ ಹೇಳಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಅಧಿಕಾರಿ ಮತ್ತು ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನದಲ್ಲಿ ಸಾಧಕಿಯರಿಗೆ ದಿಟ್ಟ ಮಹಿಳಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
‘ಮಾಡಿದ ಕೆಲಸದಿಂದ ಬೇರೊಬ್ಬರಿಗೆ ಒಳ್ಳೆಯದಾದರೆ ಸಾಕು ಎಂಬ ಭಾವನೆಯಿಂದ ರಾಜಕೀಯ, ಚಲನಚಿತ್ರ ರಂಗದಲ್ಲಿ ಸೇವೆ ಮಾಡಿದ್ದೇನೆ’ ಎಂದು ಹೇಳಿದರು.
ನಟ ಸಾಧಕೋಕಿಲ ಮಾತನಾಡಿ, ‘ಮಹಿಳೆಯಂದರೆ ತಾಯಿ. ತಾಯಿಯನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯ’ ಎಂದರು.
ಬಿಬಿಎಂಪಿ ಆಡಳಿತಾದಿಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ವಿಶೇಷ ಆಯುಕ್ತರಾದ ಜಯರಾಮ್ ರಾಯಪುರ, ಹರೀಶ್, ತ್ರಿಲೋಕ್ ಚಂದ್ರ, ಪ್ರೀತಿ ಗಣೇಶ್, ಪಲ್ಲಿವಿ, ಐಪಿಎಸ್ ಅಧಿಕಾರಿ ಶೋಭರಾಣಿ, ನಿರೂಪಕಿ ಅರ್ಪಣಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.