ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭಾಸ್‌ ಜೊತೆಗೆ ನಟಿ ಪೂಜಾ ಹೆಗ್ಡೆ ಡೇಟಿಂಗ್‌?

Last Updated 22 ಜೂನ್ 2020, 10:53 IST
ಅಕ್ಷರ ಗಾತ್ರ

ನಟಿ ಪೂಜಾ ಹೆಗ್ಡೆ ಟಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ ಬಿಡುವಿಲ್ಲದ ನಟಿ. ತೆಲುಗಿನಲ್ಲಿ ಸತತವಾಗಿ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಆಕೆಯದು. ಪರದೆ ಮೇಲೆ ತನ್ನ ಮೋಹಕ ನಗುವಿನ ಮೂಲಕ ಮೋಡಿ ಮಾಡುವ ಆಕೆ, ಲವ್‌ ಅಫೇರ್‌ ಮತ್ತು ಡೇಟಿಂಗ್‌ ವಿಷಯದಲ್ಲಿ ಆಗಾಗ್ಗೆ ಸುದ್ದಿಯಾಗುತ್ತಾರೆ.

ಬಾಲಿವುಡ್‌ನ ‘ಮೊಹೆಂಜೊದಾರೊ’ ಚಿತ್ರದಲ್ಲಿ ಹೃತಿಕ್‌ ರೋಷನ್‌ ಜೊತೆಗೆ ಕುಣಿದ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿದೆ ಎಂಬ ಸುದ್ದಿ ಹರಿದಾಡಿತ್ತು. ಕೊನೆಗೆ, ಹೃತಿಕ್‌ ನನ್ನ ಆತ್ಮೀಯ ಸ್ನೇಹಿತ ಎನ್ನುವ ಮೂಲಕ ಈ ಗಾಳಿಸುದ್ದಿಗೆ ಅಂತ್ಯವಾಡಿದ್ದರು. ಅದಾದ ಬಳಿಕ ಬಾಲಿವುಡ್‌ ನಟ ರೋಹನ್‌ ಮೆಹ್ರಾ ಜೊತೆಗೆ ಪೂಜಾ ಡೇಟಿಂಗ್‌ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಈ ಸುದ್ದಿಯನ್ನೂ ಆಕೆ ಅಲ್ಲಗೆಳೆದಿದ್ದು ಉಂಟು.

ಇತ್ತೀಚಿನ ಸಂದರ್ಶನವೊಂದಲ್ಲಿ ಪೂಜಾ ತನ್ನ ಪ್ರೀತಿ, ಮದುವೆ ಮತ್ತು ಕನಸಿನ ಹುಡುಗನ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಾಗಿ, ಆಕೆ ಡೇಟಿಂಗ್‌ನಲ್ಲಿದ್ದಾರೆಯೇ ಎಂಬುದು ಆಕೆಯ ಅಭಿಮಾನಿಗಳ ಪ್ರಶ್ನೆ. ‘ನಾನು ಮದುವೆಯಾಗುವ ಹುಡುಗ ಹ್ಯಾಂಡ್‌ಸಮ್‌ ಆಗಿರಬೇಕು. ನನ್ನನ್ನು ಚೆನ್ನಾಗಿ ನೋಡಿಕೊಳ್ಳುವ ಮನಸ್ಸು ಆತನಿಗೆ ಇರಬೇಕು. ಅದ್ಭುತವಾದ ಬಂಗಲೆಯೊಂದರಲ್ಲಿ ನಾವಿಬ್ಬರು ವಾಸಿಸಬೇಕು. ನಮ್ಮೊಟ್ಟಿಗೆ ನಮ್ಮ ಪ್ರೀತಿಯ ನಾಯಿಗಳು ಇರಬೇಕು’ ಎಂದು ತನ್ನ ಬಣ್ಣ ಬಣ್ಣದ ಭವಿಷ್ಯದ ಕನಸನ್ನು ತೆರೆದಿಟ್ಟಿದ್ದಾರೆ.

ಪೂಜಾ ಅವರ ಈ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿವೆ. ಆಕೆಯ ಕನಸಿನ ಹುಡುಗ ಪ್ರಭಾಸ್‌ ಅಲ್ಲದೇ ಬೇರೆ ಯಾರೂ ಆಗಿರಲು ಸಾಧ್ಯವಿಲ್ಲ ಎಂಬುದು ಆಕೆಯ ಅಭಿಮಾನಿಗಳ ತರ್ಕ. ಮತ್ತೊಂದೆಡೆ ಪ್ರಭಾಸ್‌ ನಟನೆಯ 20ನೇ ಚಿತ್ರಕ್ಕೆ ಪೂಜಾ ಹೆಗ್ಡೆ ಹೀರೊಯಿನ್‌. ಹಾಗಾಗಿ, ಆಕೆಯ ಸಾಂಸಾರಿಕ ನುಡಿಗಳಿಗೆ ರೆಕ್ಕೆಪುಕ್ಕ ಬಂದಿವೆ. ಆದರೆ, ಈ ಬಗ್ಗೆ ಆಕೆ ಎಲ್ಲಿಯೂ ಸ್ಪಷ್ಟನೆ ನೀಡಿಲ್ಲ.

ಪ್ರಭಾಸ್‌ ಮತ್ತು ಅನುಷ್ಕಾ ಶೆಟ್ಟಿ ನಡುವೆ ಲವ್‌ ಅಫೇರ್‌ ಇದೆ; ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ‘ಬಾಹುಬಲಿ’ ಚಿತ್ರದ ಶೂಟಿಂಗ್‌ ವೇಳೆ ಹಬ್ಬಿತ್ತು. ಕೊನೆಗೆ, ಪ್ರಭಾಸ್‌ ಈ ಸುದ್ದಿಯನ್ನು ತಿರಸ್ಕರಿಸಿದ್ದರು.

ಪ್ರಸ್ತುತ ಅಖಿಲ್‌ ಅಕ್ಕಿನೇನಿ ನಟನೆಯ ಹೊಸ ಚಿತ್ರಕ್ಕೂ ಪೂಜಾ ಹೆಗ್ಡೆಯೇ ನಾಯಕಿ. ‘ಅಲಾ ವೈಕುಂಠಪುರಮುಲೋ’ ಚಿತ್ರದ ಯಶಸ್ಸಿನ ಬಳಿಕ ಆಕೆ ಸಲ್ಮಾನ್ ‌ಖಾನ್‌ ನಟನೆಯ ‘ಕಭೀ ಈದ್‌ ಕಭೀ ದೀವಾಳಿ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ಕೊರೊನಾ ಭೀತಿಯ ಪರಿಣಾಮ ಇನ್ನೂ ಇದರ ಶೂಟಿಂಗ್‌ ಶುರುವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT