ಮಂಗಳವಾರ, ಅಕ್ಟೋಬರ್ 27, 2020
19 °C

ಡ್ರಗ್ಸ್ ಪ್ರಕರಣ: ಐಎಸ್‌ಡಿ ಪೊಲೀಸರಿಂದ ಯೋಗೀಶ್‌, ಅಯ್ಯಪ್ಪ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡ್ರಗ್ಸ್ ಜಾಲದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿರುವ ಬೆನ್ನಲ್ಲೇ, ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು ಸಹ ಡ್ರಗ್ಸ್ ಜಾಲ ಭೇದಿಸಲು ಪ್ರತ್ಯೇಕ ತನಿಖೆ ಆರಂಭಿಸಿದ್ದಾರೆ.

ಡ್ರಗ್ಸ್ ಮಾರಾಟ ಸಂಬಂಧ ಇದುವರೆಗೂ 6 ಪ್ರಕರಣ ದಾಖಲಿಸಿಕೊಂಡಿರುವ ಐಎಸ್‌ಡಿ ಪೊಲೀಸರು, ಕೆಲ ಪೆಡ್ಲರ್‌ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಅವರ ಹೇಳಿಕೆ ಆಧರಿಸಿ ಕೆಲ ನಟ–ನಟಿಯರು ಸೇರಿ ಹಲವರಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

‘ಲೂಸ್‌ ಮಾದ’ ಖ್ಯಾತಿಯ ನಟ ಯೋಗೀಶ್ ಹಾಗೂ ಸುದ್ದಿವಾಹಿನಿಯೊಂದರ ಉದ್ಯೋಗಿ ನಿಶ್ಚಿತಾ ಎಂಬುವವರನ್ನು ಸೋಮವಾರ ವಿಚಾರಣೆ ನಡೆಸಲಾಗಿದೆ. ಅವರಿಬ್ಬರ ಹೇಳಿಕೆ ಪಡೆದು ವಾಪಸ್ ಕಳುಹಿಸಲಾಗಿದೆ.

‘ನಟನಾಗಿ ಅಭಿಮಾನಿಗಳ ಜೊತೆ ಫೋಟೊ ತೆಗೆಸಿಕೊಂಡಿದ್ದೇನೆ. ಯಾವ ಪೆಡ್ಲರ್ ಸಂಪರ್ಕವೂ ನನಗಿಲ್ಲ’ ಎಂದು ಯೋಗೀಶ್ ಹೇಳಿರುವುದಾಗಿ ಗೊತ್ತಾಗಿದೆ.

ಕ್ರಿಕೆಟಿಗ ವಿಚಾರಣೆ: ‘ಬಿಗ್‌ಬಾಸ್’ ಶೋ ಸ್ಪರ್ಧಿಯಾಗಿದ್ದ ಕ್ರಿಕೆಟಿಗ ಎನ್‌.ಸಿ ಅಯ್ಯಪ್ಪ, ಕಿರುತೆರೆ ನಟಿ ಆಶಿತಾ ಚಂದ್ರಪ್ಪ ಅವರನ್ನು ಸೆ. 19ರಂದೇ ವಿಚಾರಣೆ ನಡೆಸಲಾಗಿದೆ. ತಮಗೆ ಯಾವುದೇ ಪೆಡ್ಲರ್ ಸಂಪರ್ಕವಿಲ್ಲವೆಂದು ಅವರಿಬ್ಬರು ಹೇಳಿದ್ದಾರೆ.

ಮತ್ತಿಬ್ಬರಿಗೆ ನೋಟಿಸ್: ಮಂಗಳವಾರ ಬೆಳಿಗ್ಗೆ 10ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಕಿರುತೆರೆ ಕಲಾವಿದರಿಬ್ಬರಿಗೆ ಐಎಸ್‌ಡಿ ನೋಟಿಸ್ ನೀಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು