ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video | ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಐಶ್ವರ್ಯಾ ರೈ ರ‍್ಯಾಂಪ್‌ ವಾಕ್‌

Published 3 ಅಕ್ಟೋಬರ್ 2023, 7:10 IST
Last Updated 3 ಅಕ್ಟೋಬರ್ 2023, 7:10 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್‌ ಅವರು ಪ್ಯಾರಿಸ್‌ ಫ್ಯಾಷನ್‌ ವೀಕ್‌ನಲ್ಲಿ ಹಜ್ಜೆಹಾಕಿದ್ದಾರೆ. ಲೋರಿಯಲ್‌ (L'Oreal ) ಉತ್ಪನ್ನದ ರಾಯಭಾರಿಯಾಗಿರುವ ಅವರು ಕಂಪನಿಯ ಕಾಸ್ಮೇಟಿಕ್‌ಗಳನ್ನು ಪ್ರತಿನಿಧಿಸಿ ರ‍್ಯಾಂಪ್‌ ವಾಕ್‌ ಮಾಡಿದ್ದಾರೆ.

ಬಂಗಾರದ ಬಣ್ಣದ ಗೌನ್‌ ಧರಿಸಿ, ಕರ್ಲಿ ಹೇರ್‌ ಸ್ಟೈಲ್‌ನಲ್ಲಿ ಸ್ಟೈಲಿಶ್‌ ಆಗಿ ರ‍್ಯಾಂಪ್‌ ವಾಕ್‌ ಮಾಡಿ ಅಭಿಮಾನಿಗಳನ್ನು ಸೆಳೆದಿದ್ದಾರೆ. 

ಐಶ್ವರ್ಯಾ ಅವರ ರ‍್ಯಾಂಪ್‌ ವಾಕ್‌ನ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಐಶ್ವರ್ಯ ಸೌಂದರ್ಯ ಕಂಡು ‘ರಾಣಿ ಯಾವಾಗಲೂ ರಾಣಿಯಾಗಿಯೇ ಇರುತ್ತಾರೆ, ಅವರ ಹತ್ತಿರ ಯಾರೂ ಹೋಗಲು ಸಾಧ್ಯವಿಲ್ಲ’ ಎಂದು ಕಾಮೆಂಟ್‌ ಮಾಡಿದ್ದಾರೆ.

ಐಶ್ವರ್ಯಾ ರೈ ಬಚ್ಚನ್‌ ಅವರು ಪ್ರತಿ ವರ್ಷ ಪ್ಯಾರಿಸ್‌ ಫ್ಯಾಷನ್‌ ವೀಕ್‌ ಮತ್ತು ಕ್ಯಾನಸ್‌ ಫಿಲ್ಮ್‌ ಫೆಸ್ಟಿವಲ್‌ಗಳಲ್ಲಿ ತಪ್ಪದೆ ಪಾಲ್ಗೊಳ್ಳುತ್ತಾರೆ.

ಇದೇ ವೇಳೆ ಮೊದಲ ಬಾರಿಗೆ ಪ್ಯಾರಿಸ್‌ ಫ್ಯಾಷನ್‌ ವೀಕ್‌ ಅಮಿತಾಬ್‌ ಬಚ್ಚನ್‌ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ರ‍್ಯಾಂಪ್‌ ವಾಕ್‌ನಲ್ಲಿ ಪಾಲ್ಗೊಂಡಿದ್ದಾರೆ. ಕೆಂಪು ಬಣ್ಣದ ಉಡುಗೆ ಧರಿಸಿ ನವ್ಯಾ ಹೆಜ್ಜೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT