ಕೆ.ಎಲ್.ರಾಹುಲ್ -ಅತಿಯಾ ಶೆಟ್ಟಿ ಮದುವೆ ಬಗ್ಗೆ ಸುನಿಲ್ ಶೆಟ್ಟಿ ಹೇಳಿದ್ದೇನು?

ನವದೆಹಲಿ: ಟೀಂ ಇಂಡಿಯಾ ಬ್ಯಾಟರ್ ಕೆ.ಎಲ್.ರಾಹುಲ್ ಅವರೊಂದಿಗೆ ಮಗಳು ಅತಿಯಾ ಶೆಟ್ಟಿ ಮದುವೆಯ ಬಗ್ಗೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ‘ಪಿಟಿಐ’ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಕ್ರಿಕೆಟಿಗ ರಾಹುಲ್ ಅವರನ್ನು ನಾನು ಕೂಡ ಪ್ರೀತಿಸುತ್ತೇನೆ. ರಾಹುಲ್ ಹಾಗೂ ಅತಿಯಾ ಮದುವೆಗೆ ನಮ್ಮ ಒಪ್ಪಿಗೆ ಇದೆ. ಆದರೆ, ಮದುವೆ ಯಾವಾಗ ಆಗಬೇಕು ಎಂಬುದನ್ನು ಅವರೇ ನಿರ್ಧರಿಸಬೇಕು’ ಎಂದಿದ್ದಾರೆ.
ಓದಿ... ಸರ್ಕಾರು ವಾರಿ ಪಾಟ Twitter Review: ಮಹೇಶ್–ಕೀರ್ತಿ ನಟನೆಗೆ ‘ಸೈ’ ಎಂದ ಪ್ರೇಕ್ಷಕ
‘ಆಕೆ ನನ್ನ ಮಗಳು ಆಕೆ ಬೇಗ ಮದುವೆಯಾಗಬೇಕೆಂದು ನಾನು ಬಯಸುತ್ತೇನೆ. ಅದು ಎಷ್ಟು ಬೇಗ ಆಗುವುದು ಒಳ್ಳೆಯದು. ಆದರೆ, ಮದುವೆ ಅವರ ಆಯ್ಕೆಯಾಗಿದ್ದು, ಯಾವಾಗ ಆಗಬೇಕು ಎಂಬುದರ ಬಗ್ಗೆ ರಾಹುಲ್ –ಅತಿಯಾ ನಿರ್ಧಾರ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ಅವರ ಮೇಲೆ ನನ್ನ ಆಶೀರ್ವಾದ ಯಾವಾಗಲೂ ಇರುತ್ತದೆ’ ಎಂದು ಸುನೀಲ್ ಹೇಳಿಕೊಂಡಿದ್ದಾರೆ.
ರಾಹುಲ್ ಹಾಗೂ ಅತಿಯಾ ಶೆಟ್ಟಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾತುಗಳು ಕೇಳಿಬಂದಿವೆ.
ಈ ಜೋಡಿ ಹುಟ್ಟುಹಬ್ಬದ ಸಂದರ್ಭದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಸಕ್ತ ಸಾಲಿನ ಐಪಿಎಲ್ನಲ್ಲಿ ಅಥವಾ ಐಪಿಎಲ್ 2022 ಟೂರ್ನಿಯಲ್ಲಿ ಕೆ.ಎಲ್.ರಾಹುಲ್, ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಓದಿ... ಅತಿಯಾ ಶೆಟ್ಟಿ ಜತೆ ಕಾಣಿಸಿಕೊಂಡ ಕ್ರಿಕೆಟಿಗ ಕೆ ಎಲ್ ರಾಹುಲ್
ಓದಿ... ಫಾರ್ಮ್ಗೆ ಮರಳಲು ಪರದಾಡುತ್ತಿರುವ ಕೊಹ್ಲಿ; ಪಾಕ್ ಆಟಗಾರ ರಿಜ್ವಾನ್ ಹೇಳಿದ್ದೇನು?
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.