ಸ್ಯಾಂಡಲ್ವುಡ್ ನಟಿ ಹಾಗೂ ಭರತನಾಟ್ಯ ಕಲಾವಿದೆ ಭಾವನಾ ರಾಮಣ್ಣ ಅವರು ತಾಯ್ತನದ ಸಂಭ್ರಮದಲ್ಲಿದ್ದಾರೆ. ತಮ್ಮ 40ನೇ ವಯಸ್ಸಿನಲ್ಲಿ ಐವಿಎಫ್(In vitro fertilization) ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳಿಗೆ ತಾಯಿಯಾಗುತ್ತಿದ್ದಾರೆ.

ತಾಯಿಯಾಗುತ್ತಿರುವ ಖುಷಿಯ ಸಂಗತಿ ಜತೆಗೆ ಎದುರಾದ ಅಡೆತಡೆಗಳ ಬಗ್ಗೆ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತೆರೆದಿಟ್ಟಿದ್ದಾರೆ.

ಪೋಸ್ಟ್ನಲ್ಲಿ ಏನಿದೆ?

'ಒಂದು ಹೊಸ ಅಧ್ಯಾಯ ; ಒಂದು ಹೊಸ ಲಯ'

ಈ ಮಾತನ್ನು ಹೇಳುತ್ತೇನೆ ಎಂದು ನಾನು ಹಿಂದೆಂದೂ ಊಹಿಸಿರಲಿಲ್ಲ. ಆದರೆ ನಾನೀಗ ಅದನ್ನು ಅನುಭವಿಸುತ್ತಿದ್ದೇನೆ. ಆರು ತಿಂಗಳ ಗರ್ಭಿಣಿಯಾಗಿ, ಗರ್ಭದಲ್ಲಿ ಅವಳಿ ಮಕ್ಕಳನ್ನಿಟ್ಟುಕೊಂಡಿರುವ ನಾನು ಕೃತಜ್ಞತಾ ಭಾವವನ್ನು ಹೊಂದಿದ್ದೇನೆ. ಈ ಪ್ರಯಾಣವು ಧೈರ್ಯ, ಸ್ಪಷ್ಟತೆ ಮತ್ತು ಆಳವಾದ ಹಂಬಲದಿಂದ ಕೂಡಿದೆ. ಆದರೆ ಅದು ಸುಲಭವಾಗಿರಲಿಲ್ಲ..

20–30ರ ಹರೆಯದಲ್ಲಿದ್ದಾಗ ನನ್ನ ಮನಸ್ಸಿನಲ್ಲಿ ತಾಯ್ತನದ ಆಸೆ ಇರಲಿಲ್ಲ. ಆದರೆ ನನಗೆ 40 ವರ್ಷ ತುಂಬಿದಾಗ, ತಾಯಿಯಾಗಬೇಕೆಂಬ ಆಸೆಯನ್ನು ತಡೆಯಲಾಗಲಿಲ್ಲ. ಒಂಟಿ ಮಹಿಳೆಯಾಗಿದ್ದರಿಂದ ನನ್ನ ದಾರಿ ಸುಲಭವಾಗಿರಲಿಲ್ಲ. ಅನೇಕ ಐವಿಎಫ್ ಚಿಕಿತ್ಸಾಲಯಗಳಿಗೆ ಭೇಟಿ ನೀಡಿದೆ. ಆದರೆ ಅಲ್ಲಿ ನನಗೆ ಸಕಾರಾತ್ಮಕ ಉತ್ತರ ಸಿಗಲೇ ಇಲ್ಲ. ನಾನು ಗರ್ಭಿಣಿಯಾಗುವುದು ಸಾಧ್ಯವೇ ಇಲ್ಲ ಎಂದು ಸರಾಸಗಟಾಗಿ ತಿರಸ್ಕರಿಸಿದರು.

ಬಳಿಕ ನಾನು ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ರೇನ್ಬೊ ಆಸ್ಪತ್ರೆಯಲ್ಲಿ ಡಾ. ಸುಷ್ಮಾ ಅವರನ್ನು ಭೇಟಿಯಾದೆ. ಅವರು ನನ್ನನ್ನು ಪ್ರೀತಿಯಿಂದ ಸ್ವಾಗತಿಸಿದರು. ಅವರ ಬೆಂಬಲದೊಂದಿಗೆ, ನಾನು ನನ್ನ ಮೊದಲ ಪ್ರಯತ್ನದಲ್ಲೇ ಗರ್ಭಿಣಿಯಾದೆ.

ನನ್ನ ತಂದೆ, ಒಡಹುಟ್ಟಿದವರು ಮತ್ತು ಪ್ರೀತಿಪಾತ್ರರು ಹೆಮ್ಮೆ ಮತ್ತು ಪ್ರೀತಿಯಿಂದ ನನ್ನ ಬೆಂಬಲಕ್ಕೆ ನಿಂತರು. ಆದರೆ ಕೆಲವರು ನನ್ನ ಆಯ್ಕೆಯನ್ನು ಪ್ರಶ್ನಿಸಿದರು.

ನನ್ನ ಮಕ್ಕಳಿಗೆ ತಂದೆ ಇಲ್ಲದಿರಬಹುದು, ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಪ್ರೀತಿಯಿಂದ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ಭವಿಷ್ಯದಲ್ಲಿ ಅವರು ಈ ಬಗ್ಗೆ ಪ್ರಶ್ನೆಗಳನ್ನು ಎದುರಿಸಬಹುದು ಎಂದು ನನಗೆ ತಿಳಿದಿದೆ. ಅದಕ್ಕೂ ನಾನು ಸಿದ್ಧಳಾಗಿದ್ದೇನೆ. ಪ್ರೀತಿಯು ಕುಟುಂಬವನ್ನು ರೂಪಿಸುತ್ತದೆ ಎಂದು ತಿಳಿದು ಅವರು ಬೆಳೆಯುತ್ತಾರೆ. ನನ್ನ ಕಥೆ ಒಬ್ಬ ಮಹಿಳೆಗಾದರೂ ಪ್ರೇರಣೆಯಾದರೆ ನನಗೆ ಅಷ್ಟೇ ಸಾಕು. ಶೀಘ್ರದಲ್ಲೇ ಎರಡು ಪುಟ್ಟ ಜೀವಗಳು ನನ್ನನ್ನು ಅಮ್ಮ ಎಂದು ಕರೆಯುತ್ತವೆ ಎಂದು ಭಾವನಾ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.