ಸೋಮವಾರ, ಜೂನ್ 14, 2021
25 °C

ಜನರಿಗೆ ನಿರ್ದಯವಾಗಿ ಲಾಠಿಯಲ್ಲಿ ಹೊಡೆಯಬೇಡಿ: ಪೊಲೀಸರಲ್ಲಿ ಜಗ್ಗೇಶ್‌ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌ ಪ್ರಕರಣಗಳನ್ನು ನಿಯಂತ್ರಿಸಲು ಮೇ 10ರಿಂದ ರಾಜ್ಯದಾದ್ಯಂತ 14 ದಿನಗಳ ಲಾಕ್‌ಡೌನ್‌ ಅನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಈ ಸಂದರ್ಭದಲ್ಲೇ ನಟ ಜಗ್ಗೇಶ್‌, ಪೊಲೀಸ್‌ ಇಲಾಖೆ ಮುಖ್ಯಸ್ಥರಿಗೆ ಮನವಿಯೊಂದನ್ನು ಮಾಡಿದ್ದಾರೆ. 

‘ರಾಜ್ಯದ ಆರಕ್ಷಕ ಇಲಾಖೆಯ ಮುಖ್ಯಸ್ಥರಿಗೆ ವಿನಂತಿ. ಸರ್ಕಾರ ಹಾಗೂ ತಮ್ಮ ಆದೇಶ ಪಾಲಿಸದವರಿಗೆ ದಂಡ ಹಾಕಿ ವಾಹನ ಜಪ್ತಿ ಮಾಡಿದರೆ ತೊಂದರೆ ಇಲ್ಲ. ಆದರೆ ನಿರ್ದಯವಾಗಿ ಲಾಠಿಯಲ್ಲಿ ಹೊಡೆಯಬೇಡಿ. ಯುವಕರಾದರೆ ಪರವಾಗಿಲ್ಲಾ ತಡೆಯುತ್ತಾರೆ. ಆದರೆ ವಯಸ್ಸಾದವರು ಪಾಪ ಯಾವ ಕಾಯಿಲೆ ಇರುತ್ತದೆ ನಿಮಗೇನು ತಿಳಿದಿರುತ್ತದೆ.

ಕೆಲ ಅಧಿಕಾರಿಗಳು ಒಂದು ಏಟುಕೊಟ್ಟು ಭಯಪಡಿಸುವ ಬದಲು ಪ್ರಾಣಹೋಗುವಂತೆ ಹೊಡೆಯುತ್ತಾರೆ. ಈ ಹಾಳಾದ ಕೊರೊನಾ ಮನುಕುಲದ ಅನ್ನ ದುಡಿಮೆ ನೆಮ್ಮದಿಯನ್ನು ಕಸಿದಿದೆ. ಮನುಷ್ಯರಾಗಿ ನಾವು ಮನುಷ್ಯತ್ವ ಪಾಲಿಸುವ. ಜನತೆಯಲ್ಲಿ ಒಂದು ಮನವಿ, ಈ ರೋಗ ಮನುಕುಲದ ಸಾವಿಗಾಗಿಯೇ ಬಂದಿದೆ. ದಯಮಾಡಿ ಸ್ವಲ್ಪ ದಿನ ವೈದ್ಯಲೋಕದ ಮಾತಿನಂತೆ ಕೆಲ ತಿಂಗಳು ಎಚ್ಚರವಾಗಿ ಇದ್ದುಬಿಡಿ’ ಎಂದು ಟ್ವೀಟ್‌ನಲ್ಲಿ ಜಗ್ಗೇಶ್‌ ಉಲ್ಲೇಖಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು