

ಸಿನಿಮಾ ಆರಂಭದಲ್ಲಿ ದಳಪತಿ ವಿಜಯ್ ಅವರಿಗೆ ₹251 ಕೋಟಿ ನೀಡುವುದಾಗಿ ಹೇಳಿದ್ದರೂ ಮಾತುಕತೆಗಳ ನಂತರ ₹220 ಕೋಟಿ ಪಾವತಿಸಲಾಗಿದೆ. ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹1,000 ಕೋಟಿಗಳಿಗಿಂತ ಹೆಚ್ಚಿನ ಗಳಿಕೆ ಮಾಡಿದರೆ, ₹31 ಕೋಟಿ ಬೋನಸ್ ಆಗಿ ಪಾವತಿಸಲಾಗುತ್ತದೆ ಎಂದು ನಿರ್ಮಾಣ ಸಂಸ್ಥೆ ಹೇಳಿರುವುದಾಗಿ ವರದಿಯಾಗಿದೆ.
ಚಿತ್ರ ಕೃಪೆ: KVN Productions

ಉತ್ತಮ ನಿರೂಪಣೆಯಿಂದಲೇ ಹೆಸರು ಪಡೆದಿರುವ ಸಿನಿಮಾ ನಿರ್ದೇಶಕ ಎಚ್. ವಿನೋದ್ ಅವರು ₹25 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಚಿತ್ರ ಕೃಪೆ: KVN Productions

ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿರುವ ಬಾಬಿ ಡಿಯೋಲ್ ಅವರು ₹5 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಚಿತ್ರ ಕೃಪೆ: KVN Productions

ಬೀಸ್ಟ್ ಚಿತ್ರದ ಯಶಸ್ಸಿನ ನಂತರ ಪೂಜಾ ಹೆಗ್ಡೆ ಸಿನಿಮಾದಲ್ಲಿ ತಮ್ಮ ಕಾಯಲ್ ಪಾತ್ರಕ್ಕಾಗಿ ₹3 ಕೋಟಿ ಪಡೆದಿದ್ದಾರೆ ಎಂದು ವರದಿಯಾಗಿದೆ.
ಚಿತ್ರ ಕೃಪೆ: KVN Productions

ಜನ ನಾಯಗನ್ ಚಿತ್ರದಲ್ಲಿ ವಿಜಯ್ ಅವರ ದತ್ತು ಪುತ್ರಿ ವಿಜಿ ಶ್ರೀಕಾಂತ್ ಪಾತ್ರದಲ್ಲಿ ನಟಿಸಿರುವ ಮಮಿತಾ ಬೈಜು ಅವರಿಗೆ ₹60 ಲಕ್ಷ ಸಂಭಾವನೆ ನೀಡಲಾಗಿದೆ ಎಂದು ವರದಿಯಾಗಿದೆ.
ಚಿತ್ರ ಕೃಪೆ: KVN Productions

ಚಲನಚಿತ್ರ ನಿರ್ಮಾಪಕ, ನಟ ಗೌತಮ್ ವಾಸುದೇವ್ ಮೆನನ್ ಜನ ನಾಯಗನ್ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ₹30 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಚಿತ್ರ ಕೃಪೆ: KVN Productions

ಕೈಥಿ ಹಾಗೂ ವಿಕ್ರಮ್ ಸಿನಿಮಾಗಳಿಂದ ಹೆಸರುವಾಸಿಯಾಗಿರುವ ನರೈನ್ ರಾಮ್ ಅವರು ಜನ ನಾಯಗನ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅವರು ಅಲ್ ಹುಮನಾಯ್ಡ್ ಎಂಬ ವಿಜ್ಞಾನಿಯ ಪಾತ್ರದಲ್ಲಿ ನಟಿಸಿದ್ದು, ₹15 ರಿಂದ ₹20 ಲಕ್ಷಗಳ ವರೆಗೆ ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತದೆ.
ಚಿತ್ರ ಕೃಪೆ: KVN Productions
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.