ಮಂಗಳವಾರ, ಸೆಪ್ಟೆಂಬರ್ 29, 2020
21 °C

ನಟಿ ಶ್ರೀದೇವಿ ಹುಟ್ಟುಹಬ್ಬಕ್ಕೆ ತಾಯಿ ಜತೆಗಿನ ಫೋಟೊ ಹಂಚಿಕೊಂಡ ಜಾಹ್ನವಿ ಕಪೂರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾರತೀಯ ಚಲನಚಿತ್ರರಂಗ ಕಂಡ ಅದ್ಭುತ ನಟಿಯರಲ್ಲಿ ಶ್ರೀದೇವಿ ಕೂಡ ಒಬ್ಬರು. ನಿನ್ನೆ (ಆಗಸ್ಟ್ 13) ದಿವಂಗತ ಶ್ರೀದೇವಿ ಅವರ 57ನೇ ಜನ್ಮದಿನ. ಈ ಸಂದರ್ಭದಲ್ಲಿ ಅವರ ಪುತ್ರಿ ಜಾಹ್ನವಿ ಕಪೂರ್ ತಾಯಿಯೊಂದಿಗಿರುವ ಫೋಟೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ಕಪ್ಪು–ಬಿಳುಪಿನ ಈ ಫೋಟೊದಲ್ಲಿ ತಾಯಿಯನ್ನು ತಬ್ಬಿ ಕುಳಿತಿದ್ದಾರೆ ಜಾಹ್ನವಿ. ತಾಯಿ–ಮಗಳಿಬ್ಬರೂ ಕ್ಯಾಮೆರಾ ಕಡೆ ನೋಡಿ ಮಂದಹಾಸ ಬೀರುತ್ತಿರುವ ಈ ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಫೋಟೊ ಜೊತೆ ’ಐ ಲವ್ ಯೂ ಮಮ್ಮಾ’ ಎಂದು ಬರೆದುಕೊಳ್ಳುವ ಮೂಲಕ ತಾಯಿಯನ್ನು ಸ್ಮರಿಸಿದ್ದಾರೆ ಜಾಹ್ನವಿ. 

2018ರ ಫೆಬ್ರುವರಿಯಲ್ಲಿ ದುಬೈನ ಹೋಟೆಲ್‌ವೊಂದರ ಬಾತ್‌ಟಬ್‌ನಲ್ಲಿ ಬಿದ್ದು ಶ್ರೀದೇವಿ ಮರಣ ಹೊಂದಿದ್ದರು. ಅವರದ್ದು ಆಕಸ್ಮಿಕ ಸಾವು ಎಂದು ದಾಖಲಾಗಿತ್ತು.

ಜಾಹ್ನವಿ ನಟನೆಯ ‘ಗುಂಜನ್ ಸಕ್ಸೇನಾ’ ಸಿನಿಮಾ ಬುಧವಾರ ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾಗಿದೆ. 

 
 
 
 

 
 
 
 
 
 
 
 
 

I love you mumma

A post shared by Janhvi Kapoor (@janhvikapoor) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು