Photos: ತಂಗಿ ಖುಷಿ ಕಪೂರ್ ಜನ್ಮದಿನದ ಸಂಭ್ರಮದಲ್ಲಿ ಜಾಹ್ನವಿ ಕಪೂರ್ ಮಿಂಚು

ಬೆಂಗಳೂರು: ದಿವಂಗತ ನಟಿ ಶ್ರೀದೇವಿ ಹಾಗೂ ನಿರ್ಮಾಪಕ ಬೋನಿ ಕಪೂರ್ ಮಗಳು ಖುಷಿ ಕಪೂರ್ ಕಳೆದ ಶುಕ್ರವಾರವಷ್ಟೇ ತಮ್ಮ 22 ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಂಡರು.
ಆದರೆ, ತಂಗಿಯ ಜನ್ಮದಿನವಿದ್ದರೂ ಸಾಕಷ್ಟು ಗಮನ ಸೆಳೆದಿದ್ದು ಖುಷಿ ಅಕ್ಕ ಹಾಗೂ ಚಿತ್ರರಂಗದಲ್ಲಿ ಮಿಂಚುತ್ತಿರುವ ದಢಕ್ ಚೆಲುವೆ ಜಾಹ್ನವಿ ಕಪೂರ್.
ಖುಷಿ ಬರ್ತಡೇ ಅಂಗವಾಗಿ ಪಾರ್ಟಿ ಆಯೋಜಿಸಲಾಗಿತ್ತು. ಈ ವೇಳೆ ಜಾಹ್ನವಿ ಕಪೂರ್ ಆಕರ್ಷಕ ಉಡುಗೆಯಲ್ಲಿ ಕಂಡು ಬಂದಿದ್ದು ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದೆ.
ಗುಲಾಬಿ ಉಡುಗೆಯಲ್ಲಿ ಜಾಹ್ನವಿ ತನ್ನ ತಂಗಿಯ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡು, ಶುಭಾಶಯ ಕೋರಿದ್ದಾರೆ. ಈ ವೇಳೆ ಜಾಹ್ನವಿಯ ಪೋಟೊಗಳು ವೈರಲ್ ಆಗಿವೆ. ನೆಟ್ಟಿಗರು, ಓಹ್! ಬಾರ್ಬಿ ಡಾಲ್ ಎಂದು ಉದ್ಘಾರ ತೆಗೆದಿದ್ದಾರೆ.
ದಢಕ್ ಹಾಗೂ ಗುಂಜೆನ ಸಕ್ಸೆನಾ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಸದ್ದು ಮಾಡಿರುವ ಜಾಹ್ನವಿ ದೋಸ್ತಾನಾ2, ಗುಡ್ ಲಕ್ ಜರ್ರೀ ಹಾಗೂ ಮಿ ಎಂಬ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಗುಡ್ ಲಕ್ ಜರ್ರೀ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಗೆ ಸಿದ್ದವಾಗಿದೆ.
ಇದನ್ನೂ ಓದಿ: ಹಾಡು ನೋಡಿ: ಸೂರ್ಯವಂಶಿಯಲ್ಲೂ ’ಟಿಪ್...ಟಿಪ್...ಬರಸಾ’ ಗುನುಗು
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.