ಶುಕ್ರವಾರ, ಮೇ 27, 2022
26 °C

ಅಭಿಮಾನಿ ಕತ್ತಲ್ಲಿ ಜಾನೂ ಹಚ್ಚೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಣ್ಣ ವಯಸ್ಸಿಗೇ ಬಾಲಿವುಡ್‌ ದಿಗ್ಗಜರ ಸಾಲಿಗೆ ಸೇರಿರುವ ನಟಿ ಜಾಹ್ನವಿ ಕಪೂರ್‌. ಸಾಮಾಜಿಕ ಮಾಧ್ಯಮಗಳಲ್ಲಿಯೂ, ಹೋದಲ್ಲಿ ಬಂದಲ್ಲಿಯೂ ಜಾಣೆ ಜಾನೂಗೆ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಬಾಂದ್ರಾದಲ್ಲಿ ನಿತ್ಯ ಹೋಗುವ ಜಿಮ್‌ಗೆ ಹೋಗುವಾಗಲೂ ಬರುವಾಗಲೂ ಒಂದಷ್ಟು ಅಭಿಮಾನಿಗಳು ಸೆಲ್ಫಿಗಾಗಿ ಕಾಯುತ್ತಿರುತ್ತಾರೆ. 

ಜಾನೂ ಮೊನ್ನೇ ತಮ್ಮ ಪಾಡಿಗೆ ಜಿಮ್‌ನಿಂದ ಹೊರಬರುತ್ತಿದ್ದರೆ ಒಬ್ಬ ಹುಡುಗಿ ಓಡಿಬಂದು, ‘ನಿಮ್ಮ ಜತೆ ಸೆಲ್ಫಿ ಬೇಕು’ ಎಂದಳು. ಅವಳ ಬೆನ್ನಿಗೇ ಒಂದು ಶಿಫಾರಸು ಬಂತು– ‘ಅವಳ ಕತ್ತಲ್ಲಿ ನಿಮ್ಮ ಹೆಸರಿನ ಮೊದಲ ಅಕ್ಷರಗಳ ಹಚ್ಚೆ (ಟ್ಯಾಟೂ) ಇದೆ. ಅದಕ್ಕೆ ಅವಳಿಗೆ ಸೆಲ್ಫಿ ಬೇಕಂತೆ’ ಎಂದು!

ಇವರಿಗೇನು ತಲೆ ಕೆಟ್ಟಿದೆಯೇ ಎಂದು ಸೊಟ್ಟಗೆ ನೋಡಿದ ಜಾನೂಗೆ ನಂಬಲಾಗದ ಸಾಕ್ಷ್ಯ ಆ ಹುಡುಗಿಯ ಕತ್ತಿನಲ್ಲಿತ್ತು! ‘ಜೆ’ ಮತ್ತು ’ಕೆ‘ ಎಂಬ ಇಂಗ್ಲಿಷ್‌ ಅಕ್ಷರಗಳ ಟ್ಯಾಟೂ! 

‘ಇದೆಂತಾ ಕ್ರೇಜ್‌! ನನಗೆ ನಂಬಲಾಗಲಿಲ್ಲ. ನಾನು ಮತ್ತು ತಂಗಿ ಖುಷಿ ಒಂದೇ ಬಗೆಯ ಟ್ಯಾಟೂ ಹಾಕ್ಕೋಬೇಕು ಅಂತ ಯೋಚಿಸ್ತಿದ್ವಿ. ಆದರೆ ಅಭಿಮಾನಿಯಾಗಿ ಆ ಹುಡುಗಿ ತೋರಿಸಿದ ಪ್ರೀತಿಯ ಮುಂದೆ ಕರಗಿ ಹೋದೆ‘ ಎಂದು ಜಾನೂ ಹೇಳಿಕೊಂಡಿದ್ದಾಳೆ.  

ಜಾನೂ ನಟಿಸಿರುವ ಒಂದೇ ಒಂದು ಚಿತ್ರ (ಧಡಕ್) ತೆರೆಕಂಡಿದೆ. ಆದರೆ ದಶಕಗಳಿಂದ ಚಾಲ್ತಿಯಲ್ಲಿರುವ ನಟಿಯರಿಗಿಂತ ಹೆಚ್ಚಿನ ಅಭಿಮಾನಿ ಬಳಗವನ್ನು ಸಂಪಾದಿಸಿಬಿಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು