ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ಪಾರ್ಟಿಗೆ ಎಂಟ್ರಿ: ಟ್ರೋಲ್‌ಗೆ ಗುರಿಯಾದ ಜಾಹ್ನವಿ!

Last Updated 8 ಏಪ್ರಿಲ್ 2022, 7:18 IST
ಅಕ್ಷರ ಗಾತ್ರ

ಮುಂಬೈ: ಫ್ಯಾಷನ್​ ಬಗ್ಗೆ ಹೆಚ್ಚು ಗಮನ ಹರಿಸುವ ಬಾಲಿವುಡ್‌ ನಟಿ ಜಾಹ್ನವಿ ಕಪೂರ್, ಆಕರ್ಷಕಉಡುಗೆಗಳಲ್ಲಿಕಾಣಿಸಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ.

ಜಾಹ್ನವಿ, ಈ ಬಾರಿ ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿಡಿನ್ನರ್‌ ಪಾರ್ಟಿಗೆ ಎಂಟ್ರಿಕೊಡುವ ಮೂಲಕ ನೆಟ್ಟಿಗರಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ.

ಜಾಹ್ನವಿ ಇತ್ತೀಚಿಗೆ ಸ್ನೇಹಿತೆ ಅನನ್ಯಾ ಪಾಂಡೆ ಅವರೊಂದಿಗೆ ಪಾರ್ಟಿಗೆ ಹೋಗಿದ್ದರು. ಆದರೆ, ಈ ಸಂದರ್ಭದಲ್ಲಿ ಅವರು ಧರಿಸಿದ್ದ ಉಡುಪು ನೋಡುಗರ ಕಣ್ಣು ಕುಕ್ಕಿಸುವಂತಿತ್ತು. ನೀಲಿ ಬಣ್ಣದ ಜಂಪ್‌ಸೂಟ್​ ಧರಿಸಿದ್ದ ಜಾಹ್ನವಿ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ.

ಈ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನೆಟ್ಟಿಗರು ಹಲವು ಬಗೆಯಲ್ಲಿ ಕಾಮೆಂಟ್​ ಮಾಡಿದ್ದಾರೆ.

ಜಾಹ್ನವಿ ಅವರ ಡ್ರೆಸ್ಸಿಂಗ್ ಸೆನ್ಸ್‌ ಬಗ್ಗೆ ಪ್ರತಿಕ್ರಿಯಿಸಿರುವ ಕೆಲವರು ‘ಈಕೆ ಭಾರತದ ಕಿಮ್​ ಕರ್ದಾಶಿಯಾನ್​’ ಎಂದು ಹೋಲಿಕೆ​ ಮಾಡಿದ್ದಾರೆ.

ಜಾಹ್ನವಿ ಕಪೂರ್, ದಿವಂಗತ ಸೂಪರ್ ಸ್ಟಾರ್ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಪುತ್ರಿ. ಅವರು 2018ರಲ್ಲಿ ತೆರೆಕಂಡ ‘ಧಡಕ್’ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT