ಭಾನುವಾರ, ಡಿಸೆಂಬರ್ 5, 2021
25 °C

ಮುದ್ದಿನ ನಾಯಿ ಪಾಂಡವನ್ನು ಕರುಂ ಕುರುಂ ಎಂದು ತಿಂದ ಜಾಹ್ನವಿ ಕಪೂರ್‌!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುದ್ದಿನ ನಾಯಿ ಪಾಂಡವನ್ನು ಕರುಂ ಕುರುಂ ಎಂದು ತಿನ್ನುವ ವಿನೋದದ ವಿಡಿಯೊವನ್ನು ಜಾಹ್ನವಿ ಕಪೂರ್‌ ಇನ್‌ಸ್ಟಾಗ್ರಾಂನ ಸ್ಟೋರಿಸ್‌ನಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳ ಮನ ಗೆದ್ದಿದ್ದಾರೆ.

ಬಿಡುವಿನ ವೇಳೆ ಸಾಕು ನಾಯಿ ಪಾಂಡ ಜೊತೆಗೆ ಜಾಹ್ನವಿ ರೀಲ್ಸ್‌ ಮಾಡಿದ್ದಾರೆ. ಹಿನ್ನೆಲೆಯಲ್ಲಿ ಕುರುಕಲು ತಿಂಡಿ ತಿನ್ನುತ್ತಿರುವ ಶಬ್ದವಿದ್ದು, ಮುದ್ದಿನ ನಾಯಿಯನ್ನು ತಿನ್ನುವಂತೆ ಜಾನ್ಹವಿ ನಟಿಸಿರುವುದು ವಿಡಿಯೊದಲ್ಲಿದೆ.

ಹಾಸಿಗೆಯ ಇನ್ನೊಂದು ಬದಿಯಲ್ಲಿ ಜಾಹ್ನವಿಯ ಹಿಂದೆ ಸಹೋದರಿ ಖುಷಿ ಕುಳಿತಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ಈ ವಿಡಿಯೊಗೆ 'ಪ್ರತೀ ಸಮಯ' ಎಂದು ತಲೆಬರಹ ನೀಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಜಾಹ್ನವಿ ಅವರು ತಂದೆ ಬೋನಿ ಕಪೂರ್‌ ಮತ್ತು ಸಹೋದರಿ ಖುಷಿ ಜೊತೆ ದುಬೈ ಪ್ರವಾಸ ಕೈಗೊಂಡಿದ್ದರು.

ಇತ್ತೀಚೆಗೆ ರಾಜ್‌ಕುಮಾರ್‌ ರಾವ್‌ ಮತ್ತು ವರುಣ್‌ ಶರ್ಮಾ ಅಭಿನಯದ 'ರೂಹಿ' ಸಿನಿಮಾದಲ್ಲಿ ಜಾಹ್ನವಿ ಕಾಣಿಸಿಕೊಂಡಿದ್ದರು. ದೋಸ್ತಾನಾ 2, ಗುಡ್‌ಲಕ್‌ ಜೆರ್ರಿ ಮತ್ತು ಕರಣ್‌ ಜೋಹಾರ್‌ನ 'ತಖ್ತ್‌' ಸಿನಿಮಾಗಳಲ್ಲಿ ಜಾಹ್ನವಿ ನಟಿಸಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ತಮ್ಮ ಹೊಸ ಚಿತ್ರ 'ಮಿ. ಆ್ಯಂಡ್‌ ಮಿಸೆಸ್‌ ಮಹಿ' ಬಗ್ಗೆ ಬಹಿರಂಗ ಪಡಿಸಿದ್ದರು. ಈ ಚಿತ್ರದಲ್ಲಿ ರಾಜ್‌ಕುಮಾರ್‌ ರಾವ್‌ ಅವರು ಮಹೇಂದ್ರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಜಾಹ್ನವಿ ಮಹಿಮಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು