ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜವಾನ್‌: ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ವೀಕ್ಷಿಸಿದ ಭಾರತೀಯ ಸಿನಿಮಾ

Published 22 ನವೆಂಬರ್ 2023, 8:11 IST
Last Updated 22 ನವೆಂಬರ್ 2023, 8:11 IST
ಅಕ್ಷರ ಗಾತ್ರ

ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟನೆಯ ‘ಜವಾನ್‌’ ಚಿತ್ರ ಜನಪ್ರಿಯ ಒಟಿಟಿ ನೆಟ್‌ಫ್ಲಿಕ್ಸ್‌ನಲ್ಲಿ ಅತಿ ಹೆಚ್ಚು ಜನರು ವೀಕ್ಷಿಸಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ.

‘ಇಂಗ್ಲೀಷ್‌ಯೇತರ ಸಿನೆಮಾ ವಿಭಾಗದಲ್ಲಿ ಮೊದಲ ಹತ್ತು ಚಲನಚಿತ್ರಗಳಲ್ಲಿ ‘ಜವಾನ್‌’ ಮೂರನೇ ಸ್ಥಾನ ಪಡೆದುಕೊಂಡಿದೆ. ಬಿಡುಗೊಡೆಯಾದ ಎರಡೇ ವಾರಗಳಲ್ಲಿ ಸುಮಾರು 3.7 ಮಿಲಿಯನ್‌ ಜನರು ವೀಕ್ಷಿಸಿದ್ದಾರೆ’ ಎಂದು ನೆಟ್‌ಫ್ಲಿಕ್ಸ್‌ ವೆಬ್‌ಸೈಟ್ ಮಾಹಿತಿ ನೀಡಿದೆ.

ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ನೆಟ್‌ಫ್ಲಿಕ್ಸ್‌, ‘ನಮ್ಮ ಮನಸ್ಸು ಗೆಲ್ಲುವಲ್ಲಿ ವಿಕ್ರಮ್‌ ರಾಥೋಡ್‌(ಶಾರುಖ್‌ ಖಾನ್‌ ಪಾತ್ರದ ಹೆಸರು) ಯಶಸ್ವಿಯಾಗಿವುದರ ಜೊತೆಗೆ ಹಲವು ದಾಖಲೆಗಳನ್ನು ಮುರಿದಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗೊಡೆಯಾದ ಎರಡೇ ವಾರದಲ್ಲಿ ಅತೀ ಹೆಚ್ಚು ವೀಕ್ಷಿಸಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ’ ಎಂದು ಹೇಳಿದೆ.

ಅಟ್ಲಿ ನಿರ್ದೇಶನದ ‘ಜವಾನ್‌’ ಚಿತ್ರ ಸೆಪ್ಟೆಂಬರ್‌ 7ರಂದು ಬಿಡುಗಡೆಗೊಂಡಿದ್ದು, ಸಿನಿಮಾದಲ್ಲಿ ನಟಿ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ ಸೇತುಪತಿ ಸೇರಿದಂತೆ ಹಲವು ಪ್ರಮುಖ ನಟ ನಟಿಯರು ಅಭಿನಯಿಸಿದ್ದರು.

ಶಾರುಖ್‌ ಖಾನ್‌ ತಮ್ಮ ಮುಂದಿನ ಚಿತ್ರ ‘ಡುಂಕಿ’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT