ನ್ಯೂಯಾರ್ಕ್: ಹಾಲಿವುಡ್ ನಟಿ ಹಾಗೂ ಖ್ಯಾತ ಪಾಪ್ ಗಾಯಕಿ ಜೆನ್ನಿಫರ್ ಲೊಪೇಜ್ ಅವರು ತಮ್ಮ ಪತಿ, ನಟ ಬೆನ್ ಅಫ್ಲೇಕ್ ಅವರಿಗೆ ವಿಚ್ಛೇದನ ನೀಡಿದ್ದಾರೆ.
54 ವರ್ಷದ ಜೆನ್ನಿಫರ್ ಅವರಿಗೆ ಇದು ನಾಲ್ಕನೇ ಮದುವೆಯಾಗಿತ್ತು.
ಲಾಸ್ ಏಂಜಲೀಸ್ ನ್ಯಾಯಾಲಯದಲ್ಲಿ ಜೆನ್ನಿಫರ್ ಲೊಪೇಜ್ ಹಾಗೂ ಗಾಯಕ ಬೆನ್ ಅಫ್ಲೇಕ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಡಿವೋರ್ಸ್ ಬಗ್ಗೆ ಈ ಇಬ್ಬರೂ ಅಧಿಕೃತ ಹೇಳಿಕೆ ನೀಡಿಲ್ಲ. 2000ರಿಂದ ಗಿಗ್ಲಿ ಸಿನಿಮಾದ ಮೂಲಕ ಪರಿಚಿತರಾಗಿದ್ದ ಇವರು 2022ರಲ್ಲಿ ಮದುವೆಯಾಗಿದ್ದರು. ಎರಡೇ ವರ್ಷದಲ್ಲಿ ಸಂಬಂಧ ಕಡಿದುಕೊಂಡಿದ್ದಾರೆ.
ಸಲೀನಾ, ಗಿಗ್ಲಿ, ಅನಕೊಂಡ, ದಿ ಬಾಯ್ ನೆಕ್ಟ್ಸ್ ಡೋರ್, ಅಟ್ಲಾಸ್ ಸೇರಿದಂತೆ ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಜೆನ್ನಿಫರ್ ನಟಿಸಿದ್ದು ಗಾಯಕಿಯಾಗಿಯೂ ಅವರು ಹೆಚ್ಚು ಪ್ರಸಿದ್ಧಿ.