ಮುಂಬೈ: ನಿಖಿಲ್ ಅಡ್ವಾಣಿ ನಿರ್ದೇಶಿಸಿರುವ, ನಟ ಜಾನ್ ಅಬ್ರಹಾಂ ಅಭಿನಯದ ‘ವೇದಾ‘ ಚಿತ್ರ ಇದೇ ಜುಲೈ 12ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಇಂದು( ಬುಧವಾರ) ತಿಳಿಸಿದೆ.

ಈ ಸಂಬಂಧ ಇನ್ಸ್ಟಾಗ್ರಾಮ್ನಲ್ಲಿ ನಟ ಜಾನ್ ಅಬ್ರಹಾಂ ಪೋಸ್ಟರ್ ಹಂಚಿಕೊಂಡಿದ್ದಾರೆ.

‘ಸಲಾಮ್-ಎ-ಇಷ್ಕ್‘ ಮತ್ತು ‘ಬಾಟ್ಲಾ ಹೌಸ್‘ ಚಿತ್ರಗಳ ಬಳಿಕ ಮತ್ತೆ ನಿಖಿಲ್ ಅಡ್ವಾಣಿ ಹಾಗೂ ಅಬ್ರಹಾಂ ಜೋಡಿ ತೆರೆ ಮೇಲೆ ಮೋಡಿ ಮಾಡಲು ಸಿದ್ಧರಾಗಿದ್ದಾರೆ.

ಅಸೀಮ್ ಅರೋರಾ ಅವರ ಚಿತ್ರಕಥೆ ಆಧರಿಸಿ ನಿರ್ದೇಶಕ ಅಡ್ವಾಣಿ ಆ್ಯಕ್ಷನ್ ಕಟ್ ಹೇಳಿದ್ದಾರೆ..

‘ವೇದಾ‘ ಕೇವಲ ಚಿತ್ರವಲ್ಲ, ಇದು ನೈಜ ಘಟನೆಗಳಿಂದ ಪ್ರೇರಿತವಾದ ಸನ್ನಿವೇಶಗಳನ್ನು ಒಳಗೊಂಡಿದೆ. ಪ್ರಸ್ತುತ ಸಮಾಜದ ಪ್ರತಿಬಿಂಬವಾಗಿ ಈ ಸಿನಿಮಾ ತೆರೆ ಮೇಲೆ ಮೂಡಿಬರಲಿದೆ ಎಂದು ಅಡ್ವಾಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಟಿ ಶಾರ್ವರಿ ವೇದಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಜೀ ಸ್ಟುಡಿಯೋಸ್, ಅಡ್ವಾಣಿಯವರ ಎಮ್ಮಿ ಎಂಟರ್ಟೈನ್ಮೆಂಟ್ ಹಾಗೂ ಅಬ್ರಹಾಂ ಅವರ ಜೆಎ ಎಂಟರ್ಟೈನ್ಮೆಂಟ್ ನಿರ್ಮಾಣ ಮಾಡಿವೆ.

ಶಾರುಖ್ ಖಾನ್ ಅಭಿನಯದ ‘ಪಠಾಣ್‘ ಚಿತ್ರದಲ್ಲಿ ಅಬ್ರಹಾಂ ಕಾಣಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.