ಶುಕ್ರವಾರ, ಏಪ್ರಿಲ್ 16, 2021
31 °C

ಜಾನ್‌ ಅಬ್ರಾಹಂ ನಟನೆ ‘ಅಟ್ಯಾಕ್’ ಆಗಸ್ಟ್ 13ಕ್ಕೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಾನ್ ಅಬ್ರಾಹಂ ನಟನೆಯ ಬಹುನಿರೀಕ್ಷಿತ ‘ಅಟ್ಯಾಕ್’ ಸಿನಿಮಾ ಆಗಸ್ಟ್ 13ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಹಾಗೂ ರಕುಲ್ ಪ್ರೀತ್ ಸಿಂಗ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಬಿಡುಗಡೆಯ ದಿನಾಂಕವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ ಜಾನ್‌.

ಈ ಚಿತ್ರಕ್ಕೆ ಲಕ್ಷ್ಯ ರಾಜ್ ಆನಂದ್ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿದ್ದು, ಸತ್ಯ ಘಟನೆಯಾಧಾರಿತ ಸಿನಿಮಾವಾಗಿದೆ.

ಆ್ಯಕ್ಷನ್ ಹಿನ್ನೆಲೆಯುಳ್ಳ ಆಟ್ಯಾಕ್‌ ಸಿನಿಮಾ ಸ್ವಾತಂತ್ರ್ಯ ದಿನಾಚರಣೆಗೂ 2 ದಿನ ಮೊದಲು ತೆರೆ ಕಾಣುತ್ತಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದ್ದಾರೆ ಜಾನ್‌.

‘ಒಂದು ಉತ್ತಮ ಕಥಾ ಹಿನ್ನೆಲೆ ಇರುವ ಆ್ಯಕ್ಷನ್ ಹಾಗೂ ಮನರಂಜನಾತ್ಮಕ ಸಿನಿಮಾ ಆಟ್ಯಾಕ್‌. ಈ ಜಾನರ್‌ನ ಸಿನಿಮಾಗಳನ್ನು ನಾನು ಇಷ್ಟಪಡುತ್ತೇನೆ. ಸ್ವಾತಂತ್ರೋತ್ಸವ ವಾರದಲ್ಲೇ ಸಿನಿಮಾ ಬಿಡುಗಡೆಯಾಗುತ್ತಿರುವ ಕಾರಣ ನನ್ನಲ್ಲಿ ಉತ್ಸಾಹ ಹೆಚ್ಚಿದೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

 

 

 

ಈ ಸಿನಿಮಾಕ್ಕೆ ಸಹ ನಿರ್ಮಾಪಕ ಕೂಡ ಆಗಿರುವ ಜಾನ್ ತಮ್ಮ ಜೆಎ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ ಅಡಿಯಲ್ಲಿ ಹಣ ಹೂಡಿಕೆ ಮಾಡಿದ್ದಾರೆ. 2016ರ ಡಿಶ್ಯುಂ ಬಳಿಕ ಜಾನ್ ಹಾಗೂ ಜಾಕ್ವೆಲಿನ್ ಮತ್ತೆ ತೆರೆ ಮೇಲೆ ಒಂದಾಗಲಿದ್ದಾರೆ.

 

ಜಾನ್ ಈಗಾಗಲೇ ತಮ್ಮ ‘ಸತ್ಯ ಮೇವ ಜಯತೆ’ ಸಿನಿಮಾ ಬಿಡುಗಡೆ ದಿನಾಂಕವನ್ನು ತಿಳಿಸಿದ್ದಾರೆ. ದಿವ್ಯಾ ಕೋಸ್ಲಾ ಕುಮಾರ್‌ ಪ್ರದಾನ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಮೇ 12ಕ್ಕೆ ಬಿಡುಗಡೆಯಾಗಲಿದೆ. ‌‌

ಆಗಸ್ಟ್‌ 13ಕ್ಕೆ ಅಲ್ಲು ಅರ್ಜುನ್‌ ಅಭಿನಯದ ತೆಲುಗಿನ ಬಹುನಿರೀಕ್ಷಿತ ಸಿನಿಮಾ ಪುಷ್ಪಾ ಕೂಡ ಬಿಡುಗಡೆಯಾಗಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು