ಬುಧವಾರ, ಜನವರಿ 29, 2020
30 °C

ತಾತನ ‍ಪಾತ್ರದಲ್ಲಿ ನಟಿಸಲು ನಿರಾಕರಿಸಿದ ಜೂ.ಎನ್‌ಟಿಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಂಗನಾ ರನೋಟ್‌ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ‘ತಲೈವಿ’ ಚಿತ್ರದ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳೂ ಹರಿದಾಡುತ್ತಿವೆ. ಈ ಚಿತ್ರದಲ್ಲಿ ಎನ್‌.ಟಿ.ರಾಮ ರಾವ್‌ ಪಾತ್ರ ನಿರ್ವಹಿಸಲು ಜೂನಿಯರ್‌ ಎನ್‌ಟಿಆರ್‌ ನಿರಾಕರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಜೂ. ಎನ್‌ಟಿಆರ್‌ ಈಗ ಎಸ್.ಎಸ್‌.ರಾಜಮೌಳಿ ಅವರ ಮೆಗಾ ಬಜೆಟ್‌ ಚಿತ್ರ ‘ಆರ್‌ಆರ್‌ಆರ್‌’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮತ್ತೊಬ್ಬ ಸ್ಟಾರ್‌ ನಟ ರಾಮ್‌ ಚರಣ್‌ ತೇಜಾ ಸಹ ನಟಿಸುತ್ತಿದ್ದಾರೆ. ಜಯಲಲಿತಾ ಜೀವನಕತೆಯಾಧಾರಿತ ಚಿತ್ರದಲ್ಲಿ ಎನ್‌ಟಿಆರ್‌ ಪಾತ್ರ ನಿರ್ವಹಿಸುವಂತೆ ಜೂ.ಎನ್‌ಟಿಆರ್‌ ಅವರನ್ನು ಚಿತ್ರತಂಡ ಕೇಳಿಕೊಂಡಿತ್ತು. ಆದರೆ ಈ ಅವಕಾಶವನ್ನು ಎನ್‌ಟಿಆರ್‌ ಒಪ್ಪಿಕೊಂಡಿಲ್ಲ.

ಇದೇ ಮೊದಲ ಬಾರಿಗೆ ಜೂನಿಯರ್‌ ಎನ್‌ಟಿಆರ್‌ ತಮ್ಮ ತಾತಾನ ಪಾತ್ರವನ್ನು ನಿರ್ವಹಿಸಲು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೆಲ ಚಿತ್ರಗಳಲ್ಲಿ ಜೂನಿಯರ್‌ ಎನ್‌ಟಿಆರ್‌ ತಮ್ಮ ತಾತನ ಪಾತ್ರ ನಿರ್ವಹಿಸಿದ್ದರು.

ಈಗ ಎನ್‌ಟಿಆರ್‌ ಪಾತ್ರಕ್ಕೆ ನಟನ ಹುಡುಕಾಟದಲ್ಲಿದೆ ‘ತಲೈವಿ’ ತಂಡ. ಈ ಚಿತ್ರದಲ್ಲಿ ಎಂಜಿಆರ್‌ ಪಾತ್ರದಲ್ಲಿ ನಟ ಅರವಿಂದ ಸ್ವಾಮಿ ನಟಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಕಳೆದ ನವೆಂಬರ್‌ 10ಕ್ಕೆ ಆರಂಭವಾಗಿದೆ. ಸದ್ಯ ಕಂಗನಾ ಹಾಗೂ ಅರವಿಂದ ಸ್ವಾಮಿ ನಟನೆಯ ಭಾಗದ ಚಿತ್ರೀಕರಣ ನಡೆಯುತ್ತಿದೆ.

ಈ ಚಿತ್ರವನ್ನು ಎ.ಎಲ್‌. ವಿಜಯ್‌ ನಿರ್ದೇಶಿಸುತ್ತಿದ್ದು, ವಿಷ್ಣುವರ್ಧನ್‌ ಇಂದೂರಿ ಹಾಗೂ ಶೈಲೇಶ್‌ ಆರ್‌ ಸಿಂಗ್‌ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವು ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು