ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅನಂತ್– ರಾಧಿಕಾ ವಿವಾಹದಲ್ಲಿ ಹಾಡಲು ಮುಂಬೈಗೆ ಬಂದ ಪಾಪ್ ಗಾಯಕ ಜಸ್ಟಿನ್‌ ಬೀಬರ್‌

Published 5 ಜುಲೈ 2024, 10:04 IST
Last Updated 5 ಜುಲೈ 2024, 10:04 IST
ಅಕ್ಷರ ಗಾತ್ರ

ಮುಂಬೈ: ಬಹುನಿರೀಕ್ಷಿತ ಅನಂತ್ ಅಂಬಾನಿ– ರಾಧಿಕಾ ಮರ್ಚಂಟ್‌ ಮದುವೆಗೆ ದಿನಗಣನೆ ಆರಂಭವಾಗಿದೆ. ಈ ಸಮಾರಂಭದ ಸಂಗೀತ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ಅಮೆರಿಕದ ಪಾಪ್‌ ಗಾಯಕ ಜಸ್ಟಿನ್‌ ಬೀಬರ್‌ ಮುಂಬೈಗೆ ಬಂದಿಳಿದಿದ್ದಾರೆ.

ಜಸ್ಟಿನ್‌ 2017ರಲ್ಲಿ ಭಾರತದಲ್ಲಿ ಮೊದಲ ಬಾರಿ ಸಂಗೀತ ಕಾರ್ಯಕ್ರಮ ನೀಡಿದ್ದರು. ಇದೀಗ ಜುಲೈ12ರಂದು ನಡೆಯಲಿರುವ ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಲು ಬಂದಿದ್ದಾರೆ.

ಮುಂಬೈನ ಖಾಸಗಿ ವಿಮಾನ ಯಾನಕ್ಕೆ ಬಳಸಲಾಗುತ್ತಿರುವ ಕಲೀನಾ ವಿಮಾನ ನಿಲ್ದಾಣಕ್ಕೆ ಜಸ್ಟಿನ್‌ ತಮ್ಮ ತಂಡದೊಂದಿಗೆ ಬಂದಿದ್ದಾರೆ. ಜಸ್ಟಿನ್‌ ಗುಲಾಬಿ ಬಣ್ಣದ ಉಡುಗೆಯಲ್ಲಿ ಕಾರನ್ನು ಹತ್ತುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಬೇಬಿ, ಲವ್‌ ಯುವರ್‌ಸೆಲ್ಫ್‌, ಬಾಯ್‌ಫ್ರೆಂಡ್‌ ಸೇರಿದಂತೆ ಹಲವಾರು ಪಾಪ್ ಗೀತೆಗಳನ್ನು ಹಾಡಿರುವ ಜಸ್ಟಿನ್‌ ಎರಡು ಬಾರಿ ಗ್ರ್ಯಾಮಿ ಪ್ರಶಸ್ತಿ ಗೆದ್ದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಹಾಡಲು ಜಸ್ಟಿನ್‌ ಸುಮಾರು ₹74 ಕೋಟಿ (10 ಮಿಲಿಯನ್ ಡಾಲರ್‌) ಸಂಭಾವನೆ ಪಡೆದಿದ್ದಾರೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. 

ಈ ಹಿಂದೆ ಜಮ್ನಾನಗರದಲ್ಲಿ ನಡೆದ ಅನಂತ್‌–ರಾಧಿಕಾ ವಿವಾಹ ಪೂರ್ವ ಸಮಾರಂಭದಲ್ಲಿ ಪಾಪ್‌ ಗಾಯಕಿ ರಿಹನ್ನಾ ಅವರು ಹಾಡಿ ರಂಜಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT