ಮಂಗಳವಾರ, ಆಗಸ್ಟ್ 20, 2019
27 °C

ಕಾರ್ತಿ ಸಿನಿಮಾದಲ್ಲಿ ಜ್ಯೋತಿಕಾ

Published:
Updated:
Prajavani

ತಮಿಳು ನಟಿ, ನಟ ಸೂರ್ಯ ಪತ್ನಿ ಜ್ಯೋತಿಕಾ ಅವರು ಸದ್ಯದಲ್ಲೇ ‘ಪಾಪನಾಶಂ’ ಚಿತ್ರ ಖ್ಯಾತಿಯ ನಿರ್ದೇಶಕ ಜೀತು ಜೋಸೆಫ್‌ ಅವರ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. 

ಈ ಚಿತ್ರದಲ್ಲಿ ಅವರ ಮೈದುನ ಕಾರ್ತಿ ಜೊತೆ ಅಭಿನಯಿಸಲಿದ್ದಾರೆ. ಈ ಚಿತ್ರವನ್ನು ಸೂರ್ಯನ ಹೋಮ್‌ ಬ್ಯಾನರ್‌ 2ಡಿ ಎಂಟರ್‌ಟೇನ್‌ಮೆಂಟ್‌ ನಿರ್ಮಾಣ ಮಾಡಲಿದ್ದು, ಚಿತ್ರಕ್ಕೆ ’ಪೊನ್‌ ಮಗಳ್‌ ವಂದಾಳ್‌’ ಎಂದು ಹೆಸರಿಡಲಾಗಿದೆ. 

ಈ ಚಿತ್ರದ ವಿಶೆಷತೆಯೆಂದರೆ, ಪ್ರಸಿದ್ಧ ನಿರ್ದೇಶಕರಾದ ಭಾರತಿರಾಜ, ಕೆ. ಭಾಗ್ಯರಾಜ್‌ ಪ್ರಮುಖ ಪಾತ್ರಗಳನ್ನು ನಿರ್ವಹಿಸಲಿದ್ದಾರಂತೆ. ‘96’ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ ಗೋವಿಂದ್‌ ವಸಂತ ಈ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಲಿದ್ದಾರೆ. 

ಇದೇ ವೇಳೆ ಮತ್ತೊಂದು ಚಿತ್ರಕ್ಕೂ ಜ್ಯೋತಿಕಾ ಸಹಿ ಮಾಡಿದ್ದು, ಜೆಜೆ ಫ್ರೆಡೆರಿಕ್‌ ನಿರ್ದೇಶನದ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Post Comments (+)