ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟದಲ್ಲಿ ‘ಕಬ್ಜ’ ಹವಾ

Last Updated 16 ಫೆಬ್ರವರಿ 2023, 19:30 IST
ಅಕ್ಷರ ಗಾತ್ರ

ಉಪೇಂದ್ರ, ‘ಕಿಚ್ಚ’ ಸುದೀಪ್ ಮತ್ತು ಶ್ರಿಯಾ ಸರಣ್‌ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ ರಿಲೀಸ್‌ಗೆ ಭರ್ಜರಿಯಾದ ಸಿದ್ಧತೆಯನ್ನು ನಿರ್ದೇಶಕ ಆರ್‌.ಚಂದ್ರು ನಡೆಸುತ್ತಿದ್ದಾರೆ. ಬಿಡುಗಡೆ ಪೂರ್ವಭಾವಿಯಾಗಿ ಈಗಾಗಲೇ ಎರಡು ಹಾಡುಗಳನ್ನು ಹೈದರಾಬಾದ್‌ ಮತ್ತು ಚೆನ್ನೈನಲ್ಲಿ ರಿಲೀಸ್‌ ಮಾಡಿರುವ ಚಿತ್ರತಂಡ, ಫೆ.26ರಂದು ರಾಜ್ಯದಲ್ಲಿ ಅದ್ಧೂರಿಯಾಗಿ ಆಡಿಯೊ ಲಾಂಚ್‌ ಕಾರ್ಯಕ್ರಮ ಆಯೋಜಿಸಲಿದೆ.

ಟ್ರೈಲರ್‌ ಬಿಡುಗಡೆ ಬಳಿಕ ಸಾಕಷ್ಟು ನಿರೀಕ್ಷೆಯನ್ನು ಭಾರತೀಯ ಚಿತ್ರರಂಗದಲ್ಲಿ ‘ಕಬ್ಜ’ ಹುಟ್ಟುಹಾಕಿದೆ. ಮಾ.17ರಂದು ವಿಶ್ವದಾದ್ಯಂತ ಸಾವಿರಕ್ಕೂ ಅಧಿಕ ಪರದೆಗಳಲ್ಲಿ ತೆರೆಗಪ್ಪಳಿಸಲು ಚಿತ್ರವು ಸಜ್ಜಾಗಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಕೈಚಳಕದ ಚಿತ್ರದ ಎರಡನೇ ಹಾಡು ‘ನಮಾಮಿ’ ಗುರುವಾರ ಬಿಡುಗಡೆಯಾಗಿದೆ.

‘ಚಿತ್ರದ ಆಡಿಯೊ ಬಿಡುಗಡೆ ಕಾರ್ಯಕ್ರಮ ಫೆ.26ರಂದು ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ಜೂನಿಯರ್ ಕಾಲೇಜು ಮೈದಾನದಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಸ್ಯಾಂಡಲ್‌ವುಡ್‌ನ ಗಣ್ಯರು ಸೇರಿದಂತೆ ಭಾರತೀಯ ಚಿತ್ರರಂಗದ ದಿಗ್ಗಜ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ’ ಎಂದಿದ್ದಾರೆ ಚಂದ್ರು. ಒಂಬತ್ತು ಭಾಷೆಗಳಲ್ಲಿ ‘ಕಬ್ಜ’ ತೆರೆಕಾಣಲಿದ್ದು, ಅತಿ ಹೆಚ್ಚು ಭಾಷೆಗಳಲ್ಲಿ ರಿಲೀಸ್‌ ಆಗುತ್ತಿರುವ ಕನ್ನಡದ ಮೊದಲ ಪ್ಯಾನ್‌ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆಯೂ ಚಿತ್ರಕ್ಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT