ಮಂಗಳವಾರ, ಮೇ 24, 2022
26 °C

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಕಾಜಲ್‌ ಅಗರ್‌ವಾಲ್‌: ಮಗನ ಹೆಸರು ಬಹಿರಂಗ! 

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆಲುಗು ನಟಿ ಕಾಜಲ್‌ ಅಗರ್‌ವಾಲ್‌ – ಗೌತಮ್‌ ಕಿಚ್ಲು ದಂಪತಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಏ.19ರಂದು (ಮಂಗಳವಾರ) ಕಾಜಲ್‌ -ಗೌತಮ್‌ ಕಿಚ್ಲು ದಂಪತಿಗೆ ಗಂಡು ಮಗು ಜನಿಸಿದೆ ಎಂದು ಸಹೋದರಿ ನಿಶಾ ಅಗರ್‌ವಾಲ್‌ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಇದೀಗ ಕಾಜಲ್‌– ಗೌತಮ್‌ ದಂಪತಿ ತಮ್ಮ ಮಗನಿಗೆ ‘ನೀಲ್ ಕಿಚ್ಲು’ ಎಂದು ನಾಮಕರಣ ಮಾಡಿದ್ದಾರೆ. ಈ ಕುರಿತು ಗೌತಮ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ಕಾಜಲ್‌– ಗೌತಮ್‌ ದಂಪತಿ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಜನವರಿಯಲ್ಲಿ ತಿಳಿಸಿದ್ದರು. ಜತೆಗೆ ಇದೇ ವಿಚಾರವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಬೇಬಿ ಬಂಪ್‌ ಫೋಟೊವನ್ನು ಹಂಚಿಕೊಂಡಿದ್ದ ಕಾಜಲ್‌, ‘2022ನೇ ವರ್ಷ ನಿಮ್ಮನ್ನು ಎದುರು ನೋಡುತ್ತಿದೆ’ ಎಂದು ಬರೆದುಕೊಂಡಿದ್ದರು.

ಕಾಜಲ್‌ ಅಗರ್‌ವಾಲ್‌ ಮತ್ತು ಗೌತಮ್‌ ಕಿಚ್ಲು ದಂಪತಿ 2020ರ ಅಕ್ಟೋಬರ್‌ 30ರಂದು ಮುಂಬೈನಲ್ಲಿ ವಿವಾಹವಾಗಿದ್ದರು.

ಪ್ರಸ್ತುತ ‘ಮೆಗಾಸ್ಟಾರ್’ ಚಿರಂಜೀವಿ ಹೀರೊ ಆಗಿರುವ ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ನಟಿಸಿದ್ದಾರೆ. ಈ ಚಿತ್ರಕ್ಕೆ ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ. ಎಸ್‌. ಶಂಕರ್‌ ನಿರ್ದೇಶನದ ‘ಇಂಡಿಯನ್‌ 2’ ಸಿನಿಮಾದಲ್ಲಿ ನಟ ಕಮಲ ಹಾಸನ್‌ಗೆ ನಾಯಕಿಯಾಗಿ ಕಾಜಲ್‌ ಕಾಣಿಸಿಕೊಳ್ಳಲಿದ್ದಾರೆ.

 

ಇವನ್ನೂ ಓದಿ...

ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದೆ ಕೆಜಿಎಫ್ 2: ಆರೇ ದಿನಕ್ಕೆ ₹676 ಕೋಟಿ?

ಸಿಗದ ಉದ್ಯೋಗ, ಟೀ ಸ್ಟಾಲ್ ತೆರೆದು ಬದುಕು ಕಟ್ಟಿಕೊಂಡ ಅರ್ಥಶಾಸ್ತ್ರ ಪದವೀಧರೆ!

ತಾಯಿಯಾಗುವ ಖುಷಿಯಲ್ಲಿ ಟೆನಿಸ್ ಲೋಕದ ‘ಬೆಡಗಿನ ತಾರೆ’ ಮರಿಯಾ ಶರಪೋವಾ

15ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಐಶ್ವರ್ಯಾ ರೈ -ಅಭಿಷೇಕ್ ಬಚ್ಚನ್ ಜೋಡಿ

 IPL: ಮಾನಸಿಕ ಒತ್ತಡದಲ್ಲಿರುವ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಅಗತ್ಯ -ರವಿಶಾಸ್ತ್ರಿ

ಪ್ರದೀಪ್ ಗವಾಂಡೆ ಜೊತೆ ಇಂದು ಹಸೆಮಣೆ ಏರಲಿರುವ ಐಎಎಸ್ ಟಾಪರ್ ಟಿನಾ ಡಾಬಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು